ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಹಿಟ್​ಮ್ಯಾನ್​; ನಾಯಕನಾಗಿ ಅನಪೇಕ್ಷಿತ ದಾಖಲೆಗೆ ಕೊರಳೊಡ್ಡಿದ Rohit Sharma

Rohit Sharma
Published on

ಮೆಲ್ಬೋರ್ನ್​: ಇಲ್ಲಿನ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯವು ರೋಚಕಘಟ್ಟ ತಲುಪಿದ್ದು, ಭಾರತದ ಗೆಲುವಿಗೆ 340 ರನ್​ಗಳ ಗುರಿಯನ್ನು ನೀಡಲಾಗಿದೆ. ಇನ್ನೂ ಗುರಿ ಬೆನ್ನತ್ತಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. ನಾಯಕ ರೋಹಿತ್​ ಶರ್ಮ (Rohit Sharma) ಮತ್ತೊಮ್ಮೆ ವಫಲ್ಯ ಅನುಭವಿಸಿದ್ದಾರೆ.

ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ರೋಹಿತ್​ ಶರ್ಮ (Rohit Sharma) ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೂ ಕೂಡ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯುವ ಸಲುವಾಗಿ ತಂಡದಲ್ಲಿ ಬದಲಾವಣೆ ಮಾಡಿದ್ದರು. ಆದರೆ, ನಾಲ್ಕನೇ ಟೆಸ್ಟ್​ ಪಂದ್ಯದಲ್ಲೂ ವೈಫಲ್ಯ ಅನುಭವಿಸಿರುವ ರೋಹಿತ್​ ಶರ್ಮ ನಾಯಕ ಪ್ಯಾಟ್​ ಕಮಿನ್ಸ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಅನಪೇಕ್ಷಿತ ದಾಖಲೆಗೆ ಕೊರಳೊಡ್ಡಿದ್ದಾರೆ.

Pat Sharma

ಪ್ಯಾಟ್​ ಕಮಿನ್ಸ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಅತಿ ಹೆಚ್ಚು ಬಾರಿ ಎದುರಾಳಿ ತಂಡದ ನಾಯಕನಿಂದ ಔಟಾದ ಆಟಗಾರ ಎಂಬ ಅಪಕೀರ್ತಿಗೆ ರೋಹಿತ್​ ಶರ್ಮ ಪಾತ್ರರಾಗಿದ್ದಾರೆ. ರೋಹಿತ್​ ಶರ್ಮ ಈವರೆಗೂ ಪ್ಯಾಟ್​ಕಮಿನ್ಸ್​​ಗೆ ಆರು ಬಾರಿ ವಿಕೆಟ್​ ಒಪ್ಪಿಸಿದ್ದು, ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ. ಈ ಮೂಲಕ ರೋಹಿತ್​ ಶರ್ಮ ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಈ ವಿಚಾರವಾಗಿ ರೋಹಿತ್​ಗೆ ಮಾಜಿ ಕ್ರಿಕೆಟಿಗರು, ಕ್ರೀಡಾಭಿಮಾನಿಗಳು ಸೇರಿದಂತೆ ಹಲವರು ನಿವೃತ್ತಿ ಪಡೆಯುವಂತೆ ಸೂಚಿಸುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯು ರೋಹಿತ್​ (Rohit Sharma) ಪಾಲಿಗೆ ನಿರ್ಣಾಯಕ ಎಂದು ಹೇಳಲಾಗಿದೆ. ಮೊದಲ ಪಂದ್ಯದಲ್ಲಿ ತಂಡಕ್ಕೆ 295 ರನ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದ ವೇಗಿ ಬುಮ್ರಾಗೆ ನಾಯಕತ್ವವನ್ನು ನೀಡುವಂತೆ ಆಗ್ರಹ ಕೇಳಿ ಬರುತ್ತಿದ್ದು, ಸರಣಿ ಮುಗಿದ ಬಳಿಕ ಅಂತಿಮ ಚಿತ್ರ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net