ವಿಶ್ವಕಪ್​ ಫೈನಲ್​ ಸೋಲಿಗೆ ಪಿಚ್​ ದೂರಿದ ದ್ರಾವಿಡ್; ​ಬಿಸಿಸಿಐ ಪರಾಮರ್ಶೆ ಸಭೆಯಲ್ಲಿ ವಿವರಣೆ

dravid web
Published on

ನವದೆಹಲಿ: ಸತತ 10 ಗೆಲುವಿನ ಅಜೇಯ ಓಟದ ಬಳಿಕ ತವರಿನ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಸೋಲಲು ಸಂಪೂರ್ಣವಾಗಿ ಪಿಚ್​ ಕಾರಣವಾಗಿದೆ ಎಂದು ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ದೂರಿದ್ದಾರೆ. ಬಿಸಿಸಿಐ ನಡೆಸಿರುವ ವಿಶ್ವಕಪ್​ ಫೈನಲ್​ ಸೋಲಿನ ಪರಾಮರ್ಶೆ ಸಭೆಯಲ್ಲಿ ದ್ರಾವಿಡ್​ ಈ ವಿವರಣೆ ನೀಡಿದ್ದಾರೆ.

ಆಸ್ಟ್ರೆಲಿಯಾ ವಿರುದ್ಧ ನವೆಂಬರ್​ 19ರಂದು ಫೈನಲ್​ ಪಂದ್ಯ ನಡೆದ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್​ ನಿರೀೆಯಂತೆ ವರ್ತಿಸಲಿಲ್ಲ. ಇದರಿಂದಾಗಿ ಟಾಸ್​ ನಿರ್ಣಾಯಕ ಪಾತ್ರ ವಹಿಸಿತು ಎಂದು ದ್ರಾವಿಡ್​, ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ, ಉಪಾಧ್ಯಕ್ಷ ರಾಜೀವ್​ ಶುಕ್ಲಾ ಸಹಿತ ಮಂಡಳಿಯ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾರೆ.

ದಣ ಆಫ್ರಿಕಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ದ್ರಾವಿಡ್​ ಮತ್ತು ನಾಯಕ ರೋಹಿತ್​ ಶರ್ಮ ಜತೆಗೆ ಬಿಸಿಸಿಐ ಅಧಿಕಾರಿಗಳು ಪರಾಮರ್ಶೆ ಸಭೆ ನಡೆಸಿದ್ದಾರೆ. ಲಂಡನ್​ನಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ರೋಹಿತ್​ ಶರ್ಮ ವಿಡಿಯೋ ಕಾಲ್​ ಮೂಲಕ ಸಭೆಯಲ್ಲಿ ಭಾಗವಹಿಸಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net