ಶ್...! ಮಗಳು ಮಲಗಿದ್ದಾಳೆ, ಎಚ್ಚರಿಸಬೇಡಿ; ರೋಹಿತ್​ ಶರ್ಮಾ ವಾರ್ನಿಂಗ್​ ಕೊಟ್ಟಿದ್ಯಾರಿಗೆ?

Rohit Sharma Miffed As Crowd Screams While Daughter Sleeps
Published on

ನವದೆಹಲಿ: ಕ್ರಿಕೆಟರ್ರೋಹಿತ್ ಶರ್ಮಾ ಅವರು ತಮ್ಮ ಮಗಳು ಸಮೈರಾಳನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

ವೈರಲ್​​ ವೀಡಿಯೋದಲ್ಲಿ ಏನಿದೆ?: ವಿಮಾನ ನಿಲ್ದಾಣದಿಂದ ರೋಹಿತ್​ ಕುಟುಂಬದೊಂದಿಗೆ ಹೊರಬರುತ್ತಿರುವಾಗ ರೋಹಿತ್​ ಅವರ ಅಭಿಮಾನಿಗಳು ಜೋರಾಗಿ ರೋಹಿತ್​ ಎಂದು ಕೂಗಿದ್ದಾರೆ. ಈ ವೇಳೆ ರೋಹಿತ್​ ತನ್ನ ತುಟಿಗಳ ಮೇಲೆ ಬೆರಳನ್ನು ಇರಿಸುವ ಮೂಲಕ ಪ್ರೇಕ್ಷಕರನ್ನು ಮೌನವಾಗಿರುವಂತೆ ಕೇಳಿಕೊಂಡಿದ್ದಾರೆ.

ಅಪ್ಪನ ತೋಳುಗಳಲ್ಲಿ ಸಮೈರಾ ಹಾಯಾಗಿ ನಿದ್ದೆಗೆ ಜಾರಿದ್ದರು. ಹೀಗಾಗಿ ಮಗಳ ನಿದ್ದೆಗೆ ಯಾವುದೇ ಭಂಗವಾಗಬಾರದೆಂದು ರೋಹಿತ್​ ಅವರು ಅಭಿಮಾನಿಗಳಲ್ಲಿ ಬೊಬ್ಬೆ ಹಾಕದೆ ಸುಮ್ಮನಿರುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ರೋಹಿತ್​ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಿದ್ದಾರೆ.

ರೋಹಿತ್​ ಶರ್ಮ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಬಯಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಿಂದ ರೋಹಿತ್​ಗೆ ಸ್ವಲ್ಪವೂ ಸಂತೋಷವಾಗಿಲ್ಲ ಮತ್ತು ಡ್ರೆಸ್ಸಿಂಗ್ ರೂಮ್‌ ನಲ್ಲಿಯೂ ಭಿನ್ನಾಭಿಪ್ರಾಯವಿದೆ ಹೀಗಾಗಿ ರೋಹಿತ್​ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net