

ಅಹಮದಬಾದ್: ಕ್ರಿಕೆಟ್ ವಿಶ್ವಕಪ್ 2023ರ ಹೈವೊಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಕೊಟ್ಟ 192 ರನ್ಗಳ ಮೊತ್ತವನ್ನು ಚೇಸ್ನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಸ್ಟೇಡಿಯಂನಲ್ಲಿ ಸಿಕ್ಸರ್ಗಳ ಅಬ್ಬರದ ಮುಖೇನ ವೇಗದ ಅರ್ಧ ಶತಕ ಸಿಡಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಅಭಿಮಾನಿಗಳು ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇಂದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ, ಕೇವಲ 42.5 ಓವರ್ಗಳಲ್ಲಿ ಪಾಕ್ ಆಟಗಾರರನ್ನು 191ಕ್ಕೆ ಆಲೌಟ್ ಮಾಡಿತು. ಇದೀಗ ಈ ಗುರಿಯನ್ನು ತಲುಪಲು ಅಖಾಡಕ್ಕೆ ಇಳಿದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಯಶಸ್ವಿಯಾಗಿ ವೇಗದ ಅರ್ಧ ಶತಕ ಗಳಿಸಿದ್ದಾರೆ.
ಇಂಡಿಯಾ...ಇಂಡಿಯಾ ಎಂಬ ಘೋಷಣೆಗಳಿಂದ ಮೊಳಗಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡದ ಪರ ಫ್ಯಾನ್ಸ್ಗಳು ಈಗಾಗಲೇ ಸಂಭ್ರಮಿಸಲು ಶರು ಮಾಡಿದ್ದಾರೆ. 153ಕ್ಕೆ 2* ವಿಕೆಟ್ಗಳನ್ನು ಕಳೆದುಕೊಂಡಿರುವ ಭಾರತ ಸುಲಭವಾಗಿ ಉಳಿದ ರನ್ಗಳನ್ನು ದಾಖಲಿಸುವ ಮೂಲಕ ಪಂದ್ಯವನ್ನು ವಶಪಡಿಸಿಕೊಳ್ಳಲಿದೆ ಎಂಬ ಭರವಸೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.