ಪಾರ್ಕ್‌ನಲ್ಲಿ ರೋಹಿತ್ ಶರ್ಮ ವರ್ಕ್‌ಔಟ್

ROHIT SHARMA for web
Published on

ಮುಂಬೈ: ಭಾರತ ನಿಗದಿತ ಓವರ್‌ಗಳ ತಂಡದ ಉಪ-ನಾಯಕ ರೋಹಿತ್ ಶರ್ಮ ಗುರುವಾರದಿಂದ ಹೊರಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕೋವಿಡ್-19ರ ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿಂದ ಕ್ರಿಕೆಟ್ ಚಟುವಟಿಕೆಗಳಿಂದ ದೂರವಿದ್ದ ರೋಹಿತ್ ಶರ್ಮ, ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡರು. ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ20 ಸರಣಿ ವೇಳೆ ರೋಹಿತ್ ಶರ್ಮ ಗಾಯಗೊಂಡು ತವರಿಗೆ ವಾಪಸಾಗಿದ್ದರು.

ಮುಂಬೈ ಮನೆಯಲ್ಲೇ ಲಾಕ್ ಆಗಿದ್ದ ರೋಹಿತ್ ಶರ್ಮಗೆ ಸಾಮಾಜಿಕ ಜಾಲತಾಣವೇ ಪ್ರಮುಖ ಅಸವಾಗಿತ್ತು. ಇದೀಗ ಹೊರಾಂಗಣದಲ್ಲಿ ಅಭ್ಯಾಸ ಆರಂಭಿಸಿರುವ ರೋಹಿತ್ ಶರ್ಮ, ಯಾವುದೇ ಕ್ಷಣದಲ್ಲಾದರೂ ಕ್ರಿಕೆಟ್ ಆಡಲು ರೆಡಿ ಎನ್ನುತ್ತಿದ್ದಾರೆ. ‘ಪಾರ್ಕ್‌ನಲ್ಲಿ ಕೆಲಹೊತ್ತು ಅಭ್ಯಾಸ ನಡೆಸಿದ್ದು ಖುಷಿ ನೀಡಿದೆ. ನನಗಂತೂ ಸಾಕಷ್ಟು ದಿನಗಳಾಗಿತ್ತು ಈ ರೀತಿ ವರ್ಕ್ ಔಟ್ ಮಾಡಿ’ ಎಂದು ರೋಹಿತ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಮೈದಾನದಲ್ಲಿ ಅಭ್ಯಾಸಕ್ಕೆ ಇನ್ನು ಅನುಮತಿ ನೀಡಿಲ್ಲ. ಮಾರ್ಚ್ 25 ರಂದು ಲಾಕ್‌ಡೌನ್ ಘೋಷಣೆಯಾದ ಬಳಿಕ ಎಲ್ಲ ಆಟಗಾರರು ತಮ್ಮಮನೆಗಳಲ್ಲೇ ಲಾಕ್ ಆಗಿದ್ದಾರೆ.

ಇದನ್ನೂ ಮೊದಲು ಟೀಮ್ ಇಂಡಿಯಾ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ, ರಾಜ್‌ಕೋಟ್‌ನಲ್ಲಿ ಇತ್ತೀಚೆಗೆ ಅಭ್ಯಾಸ ಆರಂಭಿಸಿದರೆ, ವೇಗಿ ಶಾರ್ದೂಲ್ ಠಾಕೂರ್ ಪಾಲ್ಗಾರ್ ಜಿಲ್ಲೆ ಬೊಯಿಸಾರ್‌ನಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ಅಭ್ಯಾಸ ಆರಂಭಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net