2011ರ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಫಿಕ್ಸಿಂಗ್ ಆರೋಪ ಹೊರಿಸಿ ಉಲ್ಟಾ ಹೊಡೆತ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ

sri-lanka team
Published on

ಕೊಲಂಬೊ: 2011ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿದೆ ಎಂದು ಆರೋಪ ಮಾಡಿದ್ದ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ, ಇದೀಗ ಉಲ್ಟಾ ಹೊಡೆದಿದ್ದಾರೆ. ಫೈನಲ್ ಪಂದ್ಯದ ಬಗ್ಗೆ ಕೇವಲ ಶಂಕೆ ವ್ಯಕ್ತಪಡಿಸಿದ್ದಷ್ಟೆ, ಈ ಕುರಿತು ತನಿಖೆಯಾಗಬೇಕು ಎಂದು ಹೇಳಿದ್ದೆ ಎಂದು ಮಹಿಂದಾನಂದ ಅಲುಥಗಮಗೆ ಹೇಳಿಕೊಂಡಿದ್ದಾರೆ. ಪಂದ್ಯ ಫಿಕ್ಸಿಂಗ್ ಆಗಿರುವ ಕುರಿತು ಸಂದೇಹ ಪಟ್ಟಿದ್ದೆ ಎಂದು ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತಂಡದ ಎದುರು ಹೇಳಿಕೆ ಕೊಟ್ಟಿದ್ದಾರೆ.

ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು. ಶ್ರೀಲಂಕಾ ತಂಡ ಆತಿಥೇಯ ಭಾರತ ತಂಡಕ್ಕೆ ಪಂದ್ಯ ಮಾರಿಕೊಂಡಿತ್ತು ಎಂದು ಅಲುಥಗಮಗೆ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಬಳಿಕ ಶ್ರೀಲಂಕಾ ಸರ್ಕಾರ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿತ್ತು. ನನ್ನ ಸಂದೇಹವನ್ನು ತನಿಖೆ ನಡೆಸಲಿ ಎಂದು ಹೇಳಿದ್ದೆ, ಈ ಕುರಿತು 2011ರ ಅಕ್ಟೋಬರ್ 30 ರಂದು ಐಸಿಸಿಗೂ ದೂರು ನೀಡಿದ್ದೆ ಎಂದು ಹೇಳಿದ್ದಾರೆ. ಅಲುಥಗಮಗೆ ಹೇಳಿಕೆ ಬೆನ್ನಲ್ಲೇ ಲಂಕಾದ ಮಾಜಿ ಆಟಗಾರರಾದ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ ಸಾಕ್ಷಿ ನೀಡುವಂತೆ ಆಗ್ರಹಿಸಿದ್ದರು

2011ರ ಏಪ್ರಿಲ್ 2 ರಂದು ಭಾರತದ ಟೆಸ್ಟ್ ಕ್ರಿಕೆಟ್ ಪದಾರ್ಪಣೆಗೆ 88 ವರ್ಷಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಭಾರತಕ್ಕೆ 275 ರನ್ ಟಾರ್ಗೆಟ್ ನೀಡಿತ್ತು. ಭಾರತ ಗೌತಮ್ ಗಂಭೀರ್ (97) ಹಾಗೂ ನಾಯಕ ಎಂಎಸ್ ಧೋನಿ (91) ಭರ್ಜರಿ ಬ್ಯಾಟಿಂಗ್ ಲವಾಗಿ 4 ವಿಕೆಟ್ ನಷ್ಟಕ್ಕೆ ಈ ಗುರಿ ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net