ಈ ಬಾರಿಯ ವಿಶ್ವಕಪ್​ನಲ್ಲಿ​ ಹೆಚ್ಚು ಸ್ಪರ್ಧಾತ್ಮಕತೆ: ರೋಹಿತ್​ ಶರ್ಮಾ

Rohit Sharma
Published on

ಮುಂಬೈ: ಈ ಬಾರಿ ಭಾರತದ ಆತಿಥ್ಯದಲ್ಲಿ ನಡಯುವ ಏಕದಿನ ವಿಶ್ವಕಪ್​ ಕಠಿಣ ಪೈಪೋಟಿಯಿಮದ ಕೂಡಿರಲಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ ವೇಳಾಪಟ್ಟಿ ಕುರಿತು ಪ್ರತಿಕ್ರಿಯಿಸಿದ ರೋಹಿತ್​ ಟಿ-20 ಮಾದರಿಯ ಸ್ಪೋಟಕ ಆಟವು ಈಗ ಎಲ್ಲಾ ಮಾದರಿಗಳ ಮೇಲೆ ಪ್ರಭಾವ ಬೀರಿದ್ದು, ಬ್ಯಾಟ್ಸ್​ಮನ್​ಗಳು ಆರಂಭದಿಂದಲ್ಲೇ ಆಕ್ರಮಣಕಾರಿ ಆಟವನ್ನು ಅಳವಡಿಸಿಕೊಳ್ಳಲಿದ್ಧಾರೆ.

ಕ್ರಿಕೆಟ್​ ಆಡುವ ರೀತಿ ಹಿಂದೆಂದಿಗಿಂತಲೂ ಧನಾತ್ಮವಾಗಿದ್ದು, ಈ ಬಾರಿಯ ವಿಶ್ವಕಪ್​ ಪಂದ್ಯಾವಳಿಗಳು ಹೆಚ್ಚು ಸ್ಪರ್ಧಾತ್ಮಕತೆಯಿಂದ ಕೂಡಿರಲಿದೆ. ಈ ನಿಟ್ಟಿನಲ್ಲಿ ಭಾರತ ತಂಡವು ಹೆಚ್ಚಿನ ರೀತಿಯಲ್ಲಿ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಿದೆ ಎಂದು ನಾಯಕ ರೋಹಿತ್​ ಶರ್ಮಾ ತಿಳಿಸಿದ್ದಾರೆ.

ಮಂಗಳವಾರ ಬಿಡುಗಡೆಯಾಗಿರುವ ಏಕದಿನ ವಿಶ್ವಕಪ್​ ವೇಳಾಪಟ್ಟಿಯಲ್ಲಿ ಭಾರತ ತಂಡವು ತನ್ನ ಲೀಗ್​ ಹಂತದ ಒಂಬತ್ತು ಪಂದ್ಯಗಳನ್ನು ವಿಭಿನ್ನ ಮೈದಾನಗಳಲ್ಲಿ ಆಡಲಿದೆ.

ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವು ಅಕ್ಟೋಬರ್​ 8ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅಕ್ಟೋಬರ್​ 15ರಂದು ಭಅರತವು ಪಾಕಿಸ್ತಾನ ತಂಡವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net