ಕ್ವಾಲಿಫೈಯರ್​-2ಗೆ ಮುಂಬೈ ಇಂಡಿಯನ್ಸ್​ ಎಂಟ್ರಿ; 2 ದಾಖಲೆ ಮುಡಿಗೇರಿಸಿಕೊಂಡ ರೋಹಿತ್ ಶರ್ಮ | Rohit Sharma

ವಿಜಯವಾಣಿ - 2025-05-31T084528.842
Published on

Rohit Sharma: ನಿನ್ನೆ (ಮೇ.30) ನಡೆದ ಐಪಿಎಲ್​ ಪ್ಲೇಆಫ್​ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಜಿಟಿ ವಿರುದ್ಧ ಮುಂಬೈ ಇಂಡಿಯನ್ಸ್​ 20 ರನ್​ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಕ್ವಾಲಿಫೈಯರ್​-2 ಪಂದ್ಯಕ್ಕೆ ಲಗ್ಗೆಯಿಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆ, ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಲು ಎದುರುನೋಡುತ್ತಿದೆ. ಜಿಟಿ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮ, ಇದೀಗ 2 ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.

ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ (81 ರನ್​, 50 ಎಸೆತ) ಐಪಿಎಲ್‌ನಲ್ಲಿ 300 ಸಿಕ್ಸರ್‌ ಸೇರಿದಂತೆ 7000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಎರಡು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಈ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ ಹರಿಸಿದ ರೋಹಿತ್, ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಮತ್ತು ಒಟ್ಟಾರೆಯಾಗಿ ಎರಡನೇ ಆಟಗಾರನಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಈ ಇನ್ನಿಂಗ್ಸ್‌ನಲ್ಲಿ 8 ರನ್​ನಿಂದ 7000 ರನ್‌ಗಳನ್ನು ಪೂರ್ಣಗೊಳಿಸಿದ ರೋಹಿತ್, ವಿರಾಟ್ ಕೊಹ್ಲಿ ಬಳಿಕ ಐಪಿಎಲ್‌ನಲ್ಲಿ ಈ ದಾಖಲೆಯನ್ನು ತಲುಪಿದ ಎರಡನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಅಗ್ರ 5 ಬ್ಯಾಟರ್​ಗಳು

1. ಕ್ರಿಸ್ ಗೇಲ್-357

2. ರೋಹಿತ್ ಶರ್ಮಾ-300

3. ವಿರಾಟ್ ಕೊಹ್ಲಿ-291

4. ಎಂ.ಎಸ್. ಧೋನಿ-264

5. ಎಬಿ ಡಿವಿಲಿಯರ್ಸ್-251

ಅತಿ ಹೆಚ್ಚು ರನ್ ಗಳಿಸಿದ ಅಗ್ರ 5 ಬ್ಯಾಟರ್ಸ್​

1. ವಿರಾಟ್ ಕೊಹ್ಲಿ-8618

2. ರೋಹಿತ್ ಶರ್ಮಾ-7000

3. ಶಿಖರ್ ಧವನ್-6769

4. ಡೇವಿಡ್ ವಾರ್ನರ್-6565

5. ಸುರೇಶ್ ರೈನಾ-5528

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net