4,1,4,4... ಮಯಾಂಕ್​ ವೇಗಕ್ಕೆ ರೋಹಿತ್​ ತತ್ತರ​! ದಂಡ ಹಾಕಿದ್ರು ಬುದ್ಧಿ ಕಲಿಯದ ದಿಗ್ವೇಶ್ ರಥಿ | MI vs LSG

ವಿಜಯವಾಣಿ (87)
Published on

MI vs LSG: ಇಂದು (ಏ.27) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್​ ಮತ್ತು ಲಖನೌ ಸೂಪರ್​ ಜೈಂಟ್ಸ್​ ನಡುವಿನ ಪಂದ್ಯದಲ್ಲಿ ಟಾಸ್​ ಸೋತ ಎಂಐ ಮೊದಲು ಬ್ಯಾಟ್​ ಮಾಡಿದೆ.

ಟಾಸ್​ ಸೋತ ಮುಂಬೈ ಇಂಡಿಯನ್ಸ್ ಪಡೆ ಮೊದಲು ಬ್ಯಾಟಿಂಗ್​ಗೆ ಇಳಿದಿದ್ದು, ಲಖನೌ ತಂಡಕ್ಕೆ ಮರಳಿರುವ ಮಯಾಂಕ್​ ಯಾದವ್​ ಅವರ ಓವರ್​ನಲ್ಲಿ ರೋಹಿತ್ ಶರ್ಮ ಎರಡು ಸಿಕ್ಸರ್​ಗಳನ್ನು ಸಿಡಿಸಿದರು. ಆರಂಭದಲ್ಲೇ ಅಬ್ಬರಿಸಲು ಪ್ರಾರಂಭಿಸಿದ ರೋಹಿತ್​ ಆರ್ಭಟಕ್ಕೆ ಬ್ರೇಕ್ ಹಾಕಿದ ಮಯಾಂಕ್​, ಗಂಟೆಗೆ 156.7 ಕಿ.ಮೀ ವೇಗದಲ್ಲಿ ಬಾಲ್​ ಎಸೆದು, ಸ್ಫೋಟಕವಾಗಿ ಕಾಣಿಸುತ್ತಿದ್ದ ರೋಹಿತ್​ರನ್ನು (12 ರನ್​) ಪೆವಿಲಿಯನ್​ಗೆ ಕಳುಹಿಸಿದರು.

ಇನ್ನು ತನ್ನ ವಿಚಿತ್ರ ಸಂಭ್ರಮಕ್ಕೆ ಎರಡು ಬಾರಿ ಬಿಸಿಸಿಐನಿಂದ ದಂಡ ಪಡೆದಿದ್ದರೂ ಬುದ್ಧಿ ಕಲಿಯದ ಲಖನೌ ಬೌಲರ್​ ದಿಗ್ವೇಶ್​ ರಥಿ, ಇಂದಿನ ಪಂದ್ಯದಲ್ಲಿಯೂ ಅದೇ ರೀತಿಯ ಸಂಭ್ರಮವನ್ನು ಮೈದಾನದಲ್ಲಿ ಮರುಕಳಿಸಿದ್ದಾರೆ. ಮುಂಬೈ ಪರ ಓಪನಿಂಗ್​ನಲ್ಲೇ ಆರ್ಭಟಿಸಿದ ರಿಯಾನ್ ರಿಕಲ್ಟನ್ ಅವರ ವಿಕೆಟ್​ ಪಡೆಯುತ್ತಿದ್ದಂತೆ ನೆಲದ ಮೇಲೆ ಬರೆದು, ರಥಿ ಸಂಭ್ರಮಿಸಿದ್ದಾರೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net