ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಬ್ರಹ್ಮಾಸ್ತ್ರ ಪ್ರಯೋಗಿಸಲು ರೋಹಿತ್ ಸಜ್ಜು! ಈ ಆಟಗಾರನ ಎಂಟ್ರಿ ಫಿಕ್ಸ್​

Rohit Sharma (1)
Published on

ಚೆನ್ನೈ: ಇಲ್ಲಿನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಭಾರತ (Team India) ಖುಷಿಯ ಅಲೆಯಲ್ಲಿ ತೇಲುತ್ತಿದೆ. ಪಾಕ್​ ವಿರುದ್ಧ ಗೆದ್ದು ಬೀಗಿದ ಅಹಂನಲ್ಲಿ ಟೆಸ್ಟ್​ ಸರಣಿಗೂ ಮುನ್ನವೇ ಅತಿಯಾಗಿ ಪ್ರತಿಕ್ರಿಯಿಸಿದ ಬಾಂಗ್ಲಾ (Bangladesh) ಪಡೆಗೆ ಸರಿಯಾಗಿ ಮಣ್ಣು ಮುಕ್ಕಿಸಿದ ಸಂತೋಷ ಟೀಂ ಇಂಡಿಯಾಗಿದೆ. ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾ ಪಡೆಯನ್ನು 280 ರನ್‌ಗಳಿಂದ ಸೋಲಿಸಿದ ರೋಹಿತ್​ ಪಡೆ, ಕಾನ್ಪುರದಲ್ಲಿ ನಡೆಯುವ ಎರಡನೇ ಟೆಸ್ಟ್​ ಪಂದ್ಯದಲ್ಲೂ ಇದನ್ನೇ ಮುಂದುವರಿಸಿ ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಅದಕ್ಕಾಗಿ ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ಗೌತಮ್ ಗಂಭೀರ್​ ವಿಶೇಷ ಪ್ಲಾನ್​ ಒಂದನ್ನು ಮಾಡಿಕೊಂಡಿದ್ದಾರೆ.

ಚೆನ್ನೈ ಟೆಸ್ಟ್​ನಲ್ಲಿ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲ ವಿಭಾಗಗಳಲ್ಲೂ ಸೂಪರ್ ಸಕ್ಸಸ್ ಆಗಿದ್ದರಿಂದ ಕಾನ್ಪುರದಲ್ಲೂ ಅದೇ ವೇಗವನ್ನು ಮುಂದುವರಿಸಲು ಟೀಮ್​ ಇಂಡಿಯಾದ ಬಯಸಿದೆ. ಬಾಂಗ್ಲಾಗೆ ಬಿಗ್​ ಶಾಕ್​ ನೀಡಲು ನಾಯಕ ರೋಹಿತ್ ಶರ್ಮ, ವಿಶೇಷ ಆಟಗಾರನೊಬ್ಬನನ್ನು ಕಣಕ್ಕೆ ಇಳಿಸಲಿದ್ದಾರೆ. ಆತ ಬಂದರೆ ಎದುರಾಳಿ ತಂಡ ಮಣ್ಣು ಮುಕ್ಕುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಹಾಗಾದರೆ ಆ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಆ ಆಟಗಾರ ಬೇರೆ ಯಾರೂ ಅಲ್ಲ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್.

ಮೊದಲ ಟೆಸ್ಟ್‌ನಲ್ಲಿ ಹೊರಗುಳಿದಿದ್ದ ಈ ಟಾಪ್ ಸ್ಪಿನ್ನರ್‌ನನ್ನು ರೋಹಿತ್-ಗಂಭೀರ್ ಎರಡನೇ ಟೆಸ್ಟ್‌ಗೆ ಸಿದ್ಧಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಮ್ಮ ಸ್ಪಿನ್ ಬಾಲ್​ಗಳಿಂದ ಎದುರಾಳಿಗಳನ್ನು ಉಸಿರುಗಟ್ಟಿಸುವ ಸ್ಪಿನ್ ಮಾಂತ್ರಿಕ ಕುಲದೀಪ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ತೆಗೆದುಕೊಳ್ಳಲು ಫಿಕ್ಸ್ ಆಗಿದೆ. ಇದಕ್ಕೆ ಕೆಲವು ಬಲವಾದ ಕಾರಣಗಳೂ ಇವೆ.

ಬಾಂಗ್ಲಾದೇಶಕ್ಕೆ ಶಾಕ್ ನೀಡುವ ಉದ್ದೇಶದಿಂದಲೇ ಸ್ಪಿನ್ ಪಿಚ್​ ಆಗಿರುವ ಆಗಿರುವ ಚೆಪಾಕ್ ಅನ್ನು ಪೇಸ್ ಪಿಚ್​ಗೆ ಬದಲಾಯಿಸಲಾಗಿತ್ತು. ಇದು ಯಶಸ್ವಿಯೂ ಆಯಿತು. ಇದರೊಂದಿಗೆ ಕಾನ್ಪುರದಲ್ಲೂ ಅದೇ ಯೋಜನೆಯನ್ನು ಮುಂದುವರಿಸಲು ಬಯಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ವೇಗದ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಆಕಾಶ ದೀಪ್ ಉತ್ತಮ ಪ್ರದರ್ಶನ ನೀಡಿದ್ದರೂ, ಮೂವರು ಸೀಮರ್‌ಗಳ ಅಗತ್ಯವಿಲ್ಲ ಎಂದು ಟೀಮ್ ಇಂಡಿಯಾ ಭಾವಿಸಿದೆ.

ಭಾರತೀಯ ಪರಿಸ್ಥಿತಿಗಳಲ್ಲಿ ಯಾವುದೇ ಪೇಸ್ ಪಿಚ್​ ಕೇವಲ ಒಂದೂವರೆ ದಿನಗಳ ಮಾತ್ರ ವೇಗಕ್ಕೆ ಸೂಕ್ತವಾಗಿರುತ್ತದೆ. ಅದರ ನಂತರ ಪಿಚ್​ ಚಿತ್ರಣ ಬದಲಾಗುತ್ತದೆ. ಚೆನ್ನೈ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಸಿಡಿದಿದ್ದೇ ಇದಕ್ಕೆ ತಾಜಾ ಉದಾಹರಣೆ. ಅದಕ್ಕಾಗಿಯೇ ರೋಹಿತ್ ಮೂವರು ವೇಗಿಗಳ ಬದಲಿಗೆ ಮೂವರು ಸ್ಪಿನ್ನರ್‌ಗಳೊಂದಿಗೆ ಹೋಗಲು ಬಯಸಿದ್ದಾರೆ. ಆಕಾಶ ದೀಪ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಆಡುವ ಹನ್ನೊಂದರಲ್ಲಿ ತೆಗೆದುಕೊಳ್ಳಲು ಬಯಸಿದ್ದಾರೆ. ಕುಲದೀಪ್​ ಯಾದವ್​ ತಂಡಕ್ಕೆ ಬಂದರೆ, ಬೌಲಿಂಗ್ ದಾಳಿ ಬಲಗೊಳ್ಳುತ್ತದೆ ಮತ್ತು ಬಾಂಗ್ಲಾ ಪಡೆಯನ್ನು ಸುಲಭವಾಗಿ ಸೋಲಿಸಬಹುದು ಎಂದು ರೋಹಿತ್​ ಯೋಚಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net