ಏಷ್ಯನ್​ ಗೇಮ್ಸ್​; ಟೆನ್ನಿಸ್​ ಮಿಶ್ರ ಡಬಲ್ಸ್​ನಲ್ಲಿ ರೋಹನ್​ ಬೋಪಣ್ಣ-ರುತುಜಾ ಭೋಸಲೆ ಜೋಡಿಗೆ ಒಲಿದ ಚಿನ್ನ

Tennis
Published on

ನವದೆಹಲಿ: ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದ ಟೆನ್ನಿಸ್ ಮಿಶ್ರ ಡಬಲ್ಸ್​ನಲ್ಲಿ ಭಾರತದ ರೋಹನ್​ ಬೋಪಣ್ಣ ಹಾಗೂ ರುತುಜಾ ಭೋಸಲೆ ಜೋಡಿಯು ಚಿನ್ನದ ಪದಕ ಗೆದ್ದಿದೆ.

ಚೈನೀಸ್ ತೈಪೆ ಜೋಡಿಯನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಆನ್ ಶುವೊ ಲಿಯಾಂಗ್ ಮತ್ತು ತ್ಸುಂಗ್ ಹಾವೊ ಹುವಾಂಗ್ ಜೋಡಿಯನ್ನು 2-6, 6-3, (10-4) ಅಂತರದಲ್ಲಿ ಮಣಿಸಿ ರೋಹನ್ ಬೋಪಣ್ಣ ರುತುಜಾ ಭೋಸಲೆ ಜೋಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. 

ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ ತಲಾ ಎರಡು ಚಿನ್ನ, ಬೆಳ್ಳಿ ಮತ್ತು  ಕಂಚಿನ ಪದಕ ಒಳಗೊಂಡಂತೆ ಒಟ್ಟು ಆರು ಮಿಶ್ರ ಡಬಲ್ಸ್ ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಭಾರತ ಏಷ್ಯನ್​ ಗೇಮ್ಸ್​ನಲ್ಲಿ 35 ಪದಕಗಳನ್ನು ಗೆದ್ದಂತಾಗಿದೆ. ಇದರೊಂದಿಗೆ ಭಾರತ 2002ರಿಂದ ಟೆನ್ನಿಸ್​ನಲ್ಲಿ ಚಿನ್ನದ ಪದಕಗಳ ಸರಣಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net