VIDEO| ಭಾರತೀಯ ಹೈ ಕಮಿಷನರ್​ಗೆ ಗುರುದ್ವಾರ ಪ್ರವೇಶ ನಿರಾಕರಿಸಿದ ಖಲಿಸ್ತಾನಿ ಬೆಂಬಲಿಗರು

Khalistani
Published on

ಕೆನೆಡಾ: ಭಾರತೀಯ ಹೈಕಮಿಷನರ್​ ಅವರನ್ನು ಗುರುದ್ವಾರ ಪ್ರವೇಶಿಸದಂತೆ ಖಲಿಸ್ತಾನಿ ಬೆಂಬಲಿಗರು ತಡೆದಿರುವ ಘಟನೆ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆದಿದೆ. ವಿಕ್ರಮ್ ದೊರೈಸ್ವಾಮಿ ಅವರನ್ನು ವ್ಯಕ್ತಿಯೊಬ್ಬರು ತಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಕಲಹದ ನಡುವೆ ಈ ಘಟನೆ ನಡೆದಿದೆ. ಕೆನಡಾ ಮತ್ತಿತರ ಸ್ಥಳಗಳಲ್ಲಿ ಭಾರತೀಯರು ಸಿಖ್ಖರನ್ನು ನೋಯಿಸುತ್ತಿದ್ದಾರೆ, ಗ್ಲಾಸ್ಗೋದಲ್ಲಿ ಮಾಡಿದಂತೆ ಪ್ರತಿಯೊಬ್ಬ ಸಿಖ್ಖರು ಯಾವುದೇ ಭಾರತೀಯ ರಾಯಭಾರಿ ವಿರುದ್ಧ ಪ್ರತಿಭಟಿಸಬೇಕು ಎಂದು ವ್ಯಕ್ತಿ ಹೇಳುವುದನ್ನು ವೈರಲ್ ಆಗಿರುವ ವೀಡಿಯೋದಲ್ಲಿ ಕೇಳಬಹುದಾಗಿದೆ.

ಕೆನೆಡಾದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ನಿರಂತರವಾಗಿ ಬೆದರಿಕೆಗಳನ್ನು ಹಾಕಲಾಗುತ್ತಿದ್ದು, ಈ ರೀತಿಯ ಕೃತ್ಯಗಳನ್ನು ನೋಡಿಕೊಂಡು ಸುಮ್ಮನೇ ಕೂರಲು ಸಾಧ್ಯವಿಲ್ಲ. ಕೂಡಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಗುರುದ್ವಾರಕ್ಕೆ ಭೇಟಿ ನೀಡುವ ಯಾವುದೇ ಭಾರತೀಯ ರಾಯಭಾರಿ ಅಥವಾ ಯಾವುದೇ ಭಾರತೀಯ ಸರ್ಕಾರಿ ಅಧಿಕಾರಿಯನ್ನು ಹೀಗೆಯೇ ನಡೆಸಿಕೊಳ್ಳಲಾಗುತ್ತದೆ. ಭಾರತೀಯ ಅಧಿಕಾರಿಗಳು ತಮ್ಮ ಅಧಿಕೃತ ಸಾಮರ್ಥ್ಯದಲ್ಲಿ ಗುರುದ್ವಾರಕ್ಕೆ ಭೇಟಿ ನೀಡುವುದರ ಮೇಲೆ ನಿರಂತರ ನಿಷೇಧವಿದೆ ಎಂದು ಸಿಖ್ ಯೂತ್ ಯುಕೆ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net