More

    ಏಷ್ಯನ್​ ಗೇಮ್ಸ್​; 10 ಮೀಟರ್​ ಏರ್​ ಪಿಸ್ತೂಲ್​ ವಿಭಾಗದಲ್ಲಿ ಭಾರತದ ಸರಬ್ಜೋತ್​-ದಿವ್ಯಾಗೆ ಬೆಳ್ಳಿ ಪದಕ

    ನವದೆಹಲಿ: ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಮಿಕ್ಸೆಡ್​ 10 ಮೀಟರ್​ ಏರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟುಗಳು ಶನಿವಾರ ಬೆಳ್ಳಿ ಪದಕ ಗೆದ್ದಿದ್ದಾರೆ.

    ಭಾರತದ ಸರಬ್ಜೋತ್​ ಸಿಂಗ್​ ಹಾಗೂ ದಿವ್ಯಾ.ಟಿ.ಎಸ್ ಜೋಡಿ 10 ಮೀಟರ್​ ಏರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದೆ. ಚೀನಾದ ಜಾಂಗ್ ಮತ್ತು ಜಿಯಾಂಗ್ ಜೋಡಿಯು ಚಿನ್ನದ ಪದಕವನ್ನು ಗೆದ್ದಿದೆ.

    ಶೂಟಿಂಗ್ ವಿಭಾಗದಲ್ಲಿ ಭಾರತ ಆರು ಚಿನ್ನ, ಎಂಟು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಭಾರತ ಏಷ್ಯನ್​ ಗೇಮ್ಸ್​ನಲ್ಲಿ 34 ಪದಕಗಳನ್ನು ಗೆದ್ದಂತಾಗಿದೆ. 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ವಿಭಾಗದ ಸಾಧನೆಯನ್ನು ಹಿಂದಿಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts