ಕರೊನಾ ವೈರಸ್​ ಲಾಕ್​ಡೌನ್​, ಬೇಸರ ಕಳೆಯಲು ಟ್ರಿಕ್​ ಶಾಟ್​ ಅಭ್ಯಾಸ ನಡೆಸಿದ ರೋಜರ್​ ಫೆಡರರ್​

federer
Published on

ನವದೆಹಲಿ: ಕರೊನಾ ವೈರಸ್​ ಪಿಡುಗು ವಿಶ್ವದಾದ್ಯಂತ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಪಿಡುಗು ಹೆಚ್ಚಾಗಿರುವ ಎಲ್ಲ ರಾಷ್ಟ್ರಗಳಲ್ಲೂ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್​ಡೌನ್​ ಘೋಷಿಸಲಾಗಿದೆ. ಸ್ವಿಟ್ಜರ್ಲೆಂಡ್​ ಕೂಡ ಇದಕ್ಕೆ ಹೊರತಾಗಿಲ್ಲ.

ಕರೊನಾ ವೈರಸ್​ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಟೆನಿಸ್​, ಕ್ರಿಕೆಟ್​ ಸೇರಿ ಬಹುತೇಕ ಕ್ರೀಡೆಗಳ ಅಂತಾರಾಷ್ಟ್ರೀಯ ಟೂರ್ನಿಗಳು ಮುಂದೂಡಲ್ಪಟ್ಟಿವೆ. ಇದರಿಂದ ಆಟಗಾರರಿಗೆ ಅಗತ್ಯವಾಗಿದ್ದ ವಿಶ್ರಾಂತಿ ದೊರೆತಂತಾಗಿದೆ. ಆದರೂ ಕ್ರೀಡಾ ತಾರೆಗಳು ತಮ್ಮ ಫಿಟ್​ನೆಸ್​ ಕಾಯ್ದುಕೊಳ್ಳಲು ತಮ್ಮ ಮನೆಯಂಗಳದಲ್ಲೇ ಅಭ್ಯಾಸ ಮಾಡುವುದು, ನಿಯಮಿತ ವ್ಯಾಯಾಮ ಮಾಡುವುದನ್ನು ಮುಂದುವರಿಸಿದ್ದಾರೆ. ಹೀಗೆ ಮಾಡುತ್ತಿರುವವರಲ್ಲಿ ಸ್ವಿಸ್​ ದೊರೆ ಖ್ಯಾತಿಯ ಟೆನಿಸ್​ನ ದಿಗ್ಗಜ ಆಟಗಾರ ರೋಜರ್​ ಫೆಡರರ್​ ಕೂಡ ಒಬ್ಬರಾಗಿದ್ದಾರೆ.

ತಮ್ಮ ಮನೆಯ ಅಂಗಳದಲ್ಲೇ ಟೆನಿಸ್​ ಅಭ್ಯಾಸ ಮಾಡುತ್ತಿರುವ ಅವರು ಟ್ರಿಕ್​ ಶಾಟ್​ಗಳಲ್ಲಿ ಪಾರಮ್ಯ ಸಾಧಿಸಲು ಯತ್ನಿಸುತ್ತಿದ್ದಾರೆ. ಹಿಮ ಬೀಳುತ್ತಿದ್ದರೂ ತಾವು ಟ್ರಿಕ್​ ಶಾಟ್​ ಅಭ್ಯಾಸ ನಡೆಸುತ್ತಿರುವ ಚಿತ್ರವನ್ನು ಟ್ವೀಟ್​ ಮಾಡಿರುವ ಅವರು, ಟ್ರಿಕ್​ ಶಾಟ್​ಗಳು ಮರೆತು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net