ಈ ಐವರು ಹರಾಜಿನಲ್ಲಿ ಸಖತ್​ ದುಬಾರಿಯಾಗಲಿದ್ದಾರೆ! ರಾಬಿನ್ ಉತ್ತಪ್ಪ ಸೂಚಿಸಿದ ಹೆಸರುಗಳು ಹೀಗಿವೆ | Costly

ವಿಜಯವಾಣಿ - 2024-11-21T131933.117
Published on

ನವದೆಹಲಿ: ಇದೇ ನವೆಂಬರ್​ 24-25ರಂದು ನಡೆಯಲಿರುವ ಐಪಿಎಲ್​ ಹರಾಜಿನತ್ತ ಎಲ್ಲಾ ಫ್ರಾಂಚೈಸಿಗಳ ಚಿತ್ತ ಮೂಡಿದ್ದು, ಯಾವ ಸ್ಟಾರ್​ ಆಟಗಾರರನ್ನು ತಮ್ಮ ಫ್ರಾಂಚೈಸಿಗೆ ಎಳೆದುಕೊಳ್ಳುವುದು ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಕಣ್ಣಿಟ್ಟ ಆಟಗಾರರನ್ನು ಖರೀದಿ ( IPL Auction) ಮಾಡೋದು ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ಹಲವಾರು ವರದಿಗಳು ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿದರೆ, ಮಾಜಿ ಹಿರಿಯ ಕ್ರಿಕೆಟಿಗರ ಭವಿಷ್ಯವಾಣಿಗಳು ಈಗಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸದ್ಯ ಇದೇ ರೀತಿ ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್ ಉತ್ತಪ್ಪ, ಐಪಿಎಲ್ ಆಕ್ಷನ್​ನಲ್ಲಿ ಈ ಐದು ಸ್ಪಿನ್ನರ್​ಗಳು ಸಖತ್ ದುಬಾರಿಯಾಗಲಿದ್ದಾರೆ (Costly Players) ಎಂದು ಹೇಳಿದ್ದಾರೆ.

ಈಗಾಗಲೇ ಹಲವಾರು ಸ್ಟಾರ್​ ಬ್ಯಾಟರ್​ಗಳು ಮತ್ತು ವೇಗಿಗಳ ಮೇಲೆ ಎಲ್ಲಾ ಫ್ರಾಂಚೈಸಿಗಳ ಚಿತ್ತ ಮೂಡಿದ್ದು, ಈ ಬಲಿಷ್ಠ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಬೇಕು ಎಂಬ ತರಾತುರಿಯಲ್ಲಿವೆ. ಈ ಪೈಕಿ ಕೇವಲ ಸ್ಪಿನ್ನರ್​ಗಳ ಬಗ್ಗೆ ಮಾತ್ರ ಭವಿಷ್ಯ ನುಡಿದಿರುವ ರಾಬಿನ್ ಉತ್ತಪ್ಪ, ಎರಡು ದಿನಗಳ ಕಾಲ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಇವರೆಲ್ಲ ಬಹಳ ದುಬಾರಿ ಮೊತ್ತಕ್ಕೆ ಆಯಾ ತಂಡದ ಪಾಲಾಗಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ರಾಬಿನ್ ಹೆಸರಿಸಿದ ಆ ಐದು ಸ್ಪಿನ್​ ಮಾಂತ್ರಿಕರು ಯಾರು? ಎಂಬುದರ ವಿವರ ಹೀಗಿದೆ ನೋಡಿ.

ಐವರು ಸ್ಪಿನ್ನರ್​ಗಳು ಇವರೇ

ನನ್ನ ಪ್ರಕಾರ ಕಳೆದ ಸೀಸನ್​ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಯಜುವೇಂದ್ರ ಚಹಲ್ ಈ ಬಾರಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಬಹುದು. ಅದು ಬಹಳ ದುಬಾರಿ ಮೊತ್ತಕ್ಕೆ ಎಂದರು. ಇನ್ನು ಶ್ರೀಲಂಕಾ ಸ್ಪಿನ್ನರ್​ ವನಿಂದು ಹಸರಂಗಾ ಮತ್ತು ಆ್ಯಡಮ್ ಜಾಂಪಾ ಕೂಡ ಒಳ್ಳೆಯ ಮೊತ್ತಕ್ಕೆ ಖರೀದಿ ಆಗುವ ಸಾಧ್ಯತೆಗಳಿವೆ. ಇವರ ಜತೆಗೆ ರವಿಚಂದ್ರನ್ ಅಶ್ವಿನ್ ಅವರು ದುಬಾರಿಯಾಗಲಿದ್ದು, ಹೆಸರಾಂತ ಫ್ರಾಂಚೈಸಿಯನ್ನೇ ಸೇರುತ್ತಾರೆ. ಅಷ್ಟಾಗಿ ಸದ್ದು ಮಾಡದಿದ್ದರೂ ಸಾಯಿ ಕಿಶೋರ್ ತಮ್ಮ ಹೆಸರನ್ನು ಮುಂಚೂಣಿಗೆ ತರುವುದರಲ್ಲಿ ಅನುಮಾನವಿಲ್ಲ. ಅವರ ಸಾಮರ್ಥ್ಯವನ್ನು ಗುಜರಾತ್​ ಟೈಟನ್ಸ್​ ಉತ್ತಮವಾಗಿ ಉಪಯೋಗಿಸಿಕೊಳ್ಳಲಿಲ್ಲ. ಎಲ್ಲಾ ಫಾರ್ಮೆಟ್​ನಲ್ಲಿಯೂ ಅವರ ಬೌಲಿಂಗ್ ಚೆನ್ನಾಗಿದೆ. ಹೀಗಾಗಿ ಅವರು ಗರಿಷ್ಠ ಬೆಲೆಗೆ ಖರೀದಿಯಾಗಬಹುದು ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net