ಹರಾಜಿನಲ್ಲಿ 27 ಕೋಟಿ ರೂ.! ಆವೃತ್ತಿ ಪೂರ ಅತ್ಯಂತ ಕಳಪೆ ಪ್ರದರ್ಶನ: ಮಾಜಿ ಕ್ರಿಕೆಟಿಗ ಬಿಚ್ಚುನುಡಿ | Rishabh Pant

ವಿಜಯವಾಣಿ - 2025-05-09T084515.780
Published on

Rishabh Pant: ಐಪಿಎಲ್​ 18ನೇ ಆವೃತ್ತಿಯಲ್ಲಿ ಸತತ ಸೋಲಿಗಳಿಂದ ಕಂಗೆಟ್ಟಿರುವ ಲಖನೌ ಸೂಪರ್​ ಜೈಂಟ್ಸ್​, ಸದ್ಯ ಪ್ಲೇಆಫ್​ ರೇಸ್​ನಿಂದ ಬಹಳ ದೂರ ಉಳಿದಿದೆ. ಪ್ರಸ್ತುತ ಸೋಲು-ಗೆಲುವು ಲೆಕ್ಕಾಚಾರಗಳಲ್ಲಿ ರಿಷಭ್ ಪಂತ್ ಪಡೆಯ ಪ್ಲೇಆಫ್ ಕನಸು ಭಗ್ನ ಎಂದೇ ಹೇಳಬಹುದು. ಆಡಿರುವ 11 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಂದೆಡೆ ಲಖನೌ ಹೀನಾಯ ಸೋಲು ಕಾಣುತ್ತಿದ್ದರೆ, ಅತ್ತ ಪಂತ್ ನಾಯಕತ್ವದಲ್ಲಿ ಹಾಗೂ ಬ್ಯಾಟಿಂಗ್ ಪ್ರದರ್ಶನದಲ್ಲಿ ಸೋಲು ಅನುಭವಿಸುತ್ತಿದ್ದಾರೆ. ಇದು ಸದ್ಯ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಯಾದ ರಿಷಭ್ ಪಂತ್​, ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಸಾಕ್ಷಿಯಾದರು. ಇದೇ ಸಂತಸದಲ್ಲಿದ್ದ ಎಲ್​ಎಸ್​ಜಿ ಮಾಲೀಕ ಸಂಜೀವ್​ ಗೋಯಿಂಕಾ, ಪಂತ್​ ತಮ್ಮ ತಂಡಕ್ಕೆ ಚೊಚ್ಚಲ ಐಪಿಎಲ್​ ಟ್ರೋಫಿಯನ್ನು ತಂದುಕೊಡಲಿದ್ದಾರೆ ಎಂಬ ಅಪಾರ ಭರವಸೆಯನ್ನು ಹೊಂದಿದ್ದರು. ಆದರೆ, ಆ ಭರವಸೆ, ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿದೆ.

ಸತತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರಿಷಭ್ ಪಂತ್​, ಲಖನೌ ಸೂಪರ್ ಜೈಂಟ್ಸ್​ ತಂಡವನ್ನು ಗೆಲುವಿನ ಲಯಕ್ಕೆ ತರುವಲ್ಲಿ ಮುಗ್ಗರಿಸಿದ್ದಾರೆ. ನಾಯಕತ್ವದ ಜವಾಬ್ದಾರಿ ಹೊರುವಲ್ಲಿ ಸಾಕಷ್ಟು ಎಡವಟ್ಟು ಮಾಡಿಕೊಂಡಿರುವ ಪಂತ್​, ಬೌಲಿಂಗ್ ಸೇರಿದಂತೆ ಫೀಲ್ಡ್​ನಲ್ಲಿ ಒಂದಷ್ಟು ಬದಲಾವಣೆಗಳು ಮಾಡುವಲ್ಲಿಯೂ ಪರದಾಡಿದ್ದಾರೆ. ಈ ಎಲ್ಲಾ ತಪ್ಪುಗಳು ಇದೀಗ ಅವರ ಸ್ಥಾನಕ್ಕೆ ಕುತ್ತು ತಂದಿದ್ದು, ಫ್ರಾಂಚೈಸಿಯ ಮಾಲೀಕರ ಕಣ್ಣನ್ನು ಕೆಂಪಗಾಗಿಸಿದೆ.

"ಪಂತ್ ಇಷ್ಟೊಂದು ಪರದಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ತೀರ ಕೋಪಕ್ಕೆ ತುತ್ತಾಗುತ್ತಿದ್ದಾರೆ. 27 ಕೋಟಿ ರೂ.ಗೆ ಖರೀದಿಸಿದಾಗ ಅದೊಂದು ದೊಡ್ಡ ಘಳಿಗೆ ಆಗಿತ್ತು ಅವರಿಗೆ. ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ನೋಡಿರುವ ರಿಷಭ್, ಕಾರು ಅಪಘಾತದಿಂದ ಸಾಕಷ್ಟು ಬಳಲಿದರು. ನಂತರ ಚೇತರಿಸಿಕೊಂಡು ಮೈದಾನಕ್ಕೆ ಮರಳಿದರು. ಆದರೆ, ಪ್ರದರ್ಶನದಲ್ಲಿ ಅವರ ಗ್ರಾಫ್​ ಈಗ ಕೆಳಗಿಳಿದಿದೆ" ಎಂದು ಬೇಸರ ಹೊರಹಾಕಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net