

ಮೇಷ: ಹೊಸ ಹೂಡಿಕೆದಾರರ ಆಗಮನ. ವೀಸಾ ಸಮಸ್ಯೆ ಪರಿಹಾರವಾಗಲಿದೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 5
ವೃಷಭ: ಹೂವು ಮತ್ತು ಹಣ್ಣು ಮಾರಾಟದಲ್ಲಿ ವಿಶೇಷ ಲಾಭ. ಮಳಿಗೆ ಮಾಲೀಕರಿಗೆ ಲಾಭ. ದಿನಾಂತ್ಯದಲ್ಲಿ ಅಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 2
ಮಿಥುನ: ಅಡಿಕೆ, ತೆಂಗು ಬೆಳೆಗಾರರಿಗೆ ಧನ ನಷ್ಟ. ಗ್ರಂಧಿಗೆ ಅಂಗಡಿ ಪ್ರಾರಂಭಕ್ಕೆ ಯೋಚನೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಕಲಹ ಸಾಧ್ಯತೆ. ಶುಭಸಂಖ್ಯೆ: 9
ಕಟಕ: ಮಗಳ ವಿವಾಹದ ಪ್ರಯತ್ನ ಯಶಸ್ವಿಯಾಗಲಿದೆ. ಸಗಟು ವ್ಯಾಪಾರದಲ್ಲಿ ಲಾಭ. ಪ್ರೀತಿ ಪ್ರೇಮದ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ:3
ಸಿಂಹ: ಮಹಿಳಾ ಸಹೋದ್ಯೋಗಿಗಳೊಂದಿಗೆ ಕಿರಿಕಿರಿ. ನಿವೇಶನ ಖರೀದಿಯಲ್ಲಿ ಗೊಂದಲ. ಐಟಿ ಉದ್ಯೋಗಿಗಳಿಗೆ ಉದ್ಯೋಗ ನಷ್ಟ. ಶುಭಸಂಖ್ಯೆ:1
ಕನ್ಯಾ: ಸಂಶೋಧನಾ ಕ್ಷೇತ್ರದವರಿಗೆ ಸರ್ಕಾರದಿಂದ ಪುರಸ್ಕಾರ. ಉನ್ನತ ವಿದ್ಯಾಭ್ಯಾಸದ ಕನಸು ನನಸಾಗಲಿದೆ. ವಿಚ್ಛೇದಿತರಿಗೆ ಸಮಸ್ಯೆ. ಶುಭಸಂಖ್ಯೆ: 7
ತುಲಾ: ತಾಂತ್ರಿಕ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಸುದಿನ. ಸಂಗಾತಿಯ ಸಹಾಯದಿಂದ ಜಟಿಲ ಸಮಸ್ಯೆಯಿಂದ ಪಾರಾಗುವಿರಿ. ಶುಭಸಂಖ್ಯೆ:4
ವೃಶ್ಚಿಕ: ತಾಯಿ ಕಡೆಯ ಆಸ್ತಿ ಪ್ರಾಪ್ತಿಯಲ್ಲಿ ತೊಂದರೆ. ಅವಿವಾಹಿತರಿಗೆ ಶುಭ ಸುದ್ದಿ. ವಿದೇಶದಲ್ಲಿ ಉದ್ಯೋಗ. ಇಷ್ಟ ದೇವರನ್ನು ನಂಬಿ. ಶುಭಸಂಖ್ಯೆ: 9
ಧನುಸ್ಸು: ಕಾರ್ಖಾನೆ ಮಾಲೀಕರು, ಕಾರ್ವಿುಕರಿಗೆ ಸಮಸ್ಯೆ. ಆರಕ್ಷಕ ವರ್ಗದವರಿಗೆ ಬಡ್ತಿ. ಬಂಧು ವರ್ಗದವರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 3
ಮಕರ: ಶೈಕ್ಷಣಿಕ ಕ್ಷೇತ್ರದವರಿಗೆ ಬಡ್ತಿ ಸಿಗಲಿದೆ. ಸಾರಿಗೆ ಅಧಿಕಾರಿಗಳಿಗೆ ಉನ್ನತ ಪದವಿ ಸಿಗಲಿದೆ. ಮಹಿಳೆಯರಿಗೆ ಆಭರಣ, ವಸ್ತ್ರ ಲಾಭ. ಶುಭಸಂಖ್ಯೆ:3
ಕುಂಭ: ದೂರದ ಊರಿಂದ ಬಂಧುಗಳ ಆಗಮನ. ಶುಭ ಕಾರ್ಯದ ಸಂಭ್ರಮ. ಕೃಷಿ ಉಪಕರಣಗಳ ಖರೀದಿ. ಜೇನು ಕೃಷಿಯಿಂದ ಲಾಭ. ಶುಭಸಂಖ್ಯೆ: 9
ಮೀನ: ತಂದೆಯ ಅನಾರೋಗ್ಯ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಗೊಂದಲ. ರಾಜಕಾರಣಿಗಳಿಗೆ ಹಿತ ಶತ್ರುಗಳ ಕಾಟ. ಗಾಯಕರಿಗೆ ಸನ್ಮಾನ. ಶುಭಸಂಖ್ಯೆ: 5