VIDEO| ಕೊಹ್ಲಿ-ರಿಕ್ಕಿ ಪಾಂಟಿಂಗ್​ ಮುಖಾಮುಖಿ; ಈ ವೇಳೆ ನಡೆದಿದ್ದಾದರೂ ಏನು?

Virat kohli ponting
Published on

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​(IPL) 16ನೇ ಆವೃತ್ತಿಯೂ ಹಲವು ವಿಶೇಷತೆಗಳಿಂದ ಕೂಡಿದ್ದು ಒಂದಲ್ಲ ಒಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ.

ವಿಶ್ವ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ IPLನಲ್ಲಿ ವಿವಿಧ ದೇಶಗಳ ಹಾಲಿ ಹಾಗೂ ಮಾಜಿ ಆಟಗಾರರು ತಂಡಗಳ ಭಾಗವಾಗಿರುತ್ತಾರೆ. ಇನ್ನು ಈ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ಮತ್ತಷ್ಟು ವಿಶೇಷತೆಗೆ ಸಾಕ್ಷಿಯಾಗಿದೆ.

ಕೊಹ್ಲಿ ನೋಡಿ ಮೂಕವಿಸ್ಮಿತನಾದ ಪಾಂಟಿಂಗ್​ ಪುತ್ರ

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಪಂದ್ಯ ನಡೆಯಲಿದ್ದು ಉಭಯ ತಂಡಗಳು ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾಲೀಮು ಆರಂಭಿಸಿವೆ.

ಇನ್ನು ಈ ವೇಳೆ RCB ಬ್ಯಾಟ್ಸ್​​​ಮ್ಯಾನ್​ ವಿರಾಟ್​ ಕೊಹ್ಲಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್​ ರಿಕ್ಕಿ ಪಾಂಟಿಂಗ್​ ಎದುರಾಗಿದ್ದು ಈ ವೇಳೆ ಅಚ್ಚರಿಯ ಘಟನೆ ಒಂದು ನಡೆದಿದೆ.

ಪಾಂಟಿಂಗ್​ ಪುತ್ರ ಕೊಹ್ಲಿ ಅವರನ್ನು ನೋಡುತ್ತಿದ್ದಂತೆ ಮೂಕವಿಸ್ಮಿತನಾಗಿದ್ದು ಮಾತನಾಡದೆ ಒಂದು ಕ್ಷಣ ಹಾಗೆ ನಿಂತಿರುವುದನ್ನು ಕಾಣಬಹುದು. ಈ ವೇಳೆ ಪಾಂಟಿಂಗ್​ ಅವರು ತಮ್ಮ ಪುತ್ರ ಫ್ಲೆಚರ್​ ವಿಲಿಯಮ್​ ಪಾಂಟಿಂಗ್​ಗೆ ಕೊಹ್ಲಿ ಅವರನ್ನು ಅಭಿನಂದಿಸುವಂತೆ ಹೇಳುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಗೆಲಬೇಕಾದ ಒತ್ತಡದಲ್ಲಿ ಉಭಯ ತಂಡಗಳು

ಹಾಲಿ IPL ಋತುವಿನಲ್ಲಿ ಉಭಯ ತಂಡಗಳು ಸೋಲಿನ ಸುಳಿಗೆ ಸಿಲುಕಿದ್ದು ಗೆಲಲ್ಲೇಬೇಕಾದ ಒತ್ತಡದಲ್ಲಿ ಸಿಲುಕಿವೆ. ಶನಿವಾರ ನಡೆಯುವ ಪಂದ್ಯವು ಉಭಯ ತಂಡಗಳಿಗೆ ಮಹತ್ವವಾಗಿದ್ದು ಯಾವ ತಂಡಕ್ಕೆ ಗೆಲುವಿನ ಸಿಹಿ ಧಕ್ಕಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net