

ಬೆಂಗಳೂರು: ಸಂಭ್ರಮ್ ಇನ್ಸ್ಟಿಟ್ಯೂಟ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ 2ನೇ ಆವೃತ್ತಿಯ ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಗೇಮ್ಸ್ನ ವಾಲಿಬಾಲ್ ಸ್ಪರ್ಧೆಯಲ್ಲಿ ಆತಿಥೇಯ ಭಾರತ ತಂಡ ರನ್ನರ್ಅಪ್ ಸ್ಥಾನ ಪಡೆದಿದೆ. ಭಾರತ ತಂಡದ ಮದನ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದ ಕ್ರೀಡಾಕೂಟದಲ್ಲಿ ವಾಲಿಬಾಲ್ ಜತೆಗೆ ಟೇಕ್ವಾಂಡೊ, ಕರಾಟೆ, ಯೋಗಾ ಮತ್ತು ಸ್ಟಿಕ್ ಫೈಟಿಂಗ್ ಸ್ಪರ್ಧೆಗಳು ನಡೆದವು. ಟೇಕ್ವಾಂಡೊದಲ್ಲಿ ರುಹನಿ ಟೇಕ್ವಾಂಡೊ ಸೆಂಟರ್ ಸಮಗ್ರ ಚಾಂಪಿಯನ್ ಪಟ್ಟವೇರಿದರೆ, ಚೈನ್ ಕಿ ಮಾರ್ಷಲ್ ಆರ್ಟ್ಸ್ ಸೆಂಟರ್ ರನ್ನರ್ಅಪ್ ಸ್ಥಾನ ಪಡೆಯಿತು.