More

    VIDEO| ಅಮಿತಾಭ್​ ಬಚ್ಚನ್​ ಸ್ಟೈಲ್​ನಲ್ಲಿ ಮಿಂಚಿದ ಟೀಮ್​ ಇಂಡಿಯಾ ಕೋಚ್​ ದ್ರಾವಿಡ್​! ವಿಡಿಯೋ ವೈರಲ್​…

    ಬೆಂಗಳೂರು: ಭಾರತದಲ್ಲಿ ಎರಡು ಗೋಡೆಗಳು ಜನಪ್ರಿಯ. ಒಂದು ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್​ ಅವರ ‘ದೀವಾರ್​’. ಇನ್ನೊಂದು ಟೀಮ್​ ಇಂಡಿಯಾದ ‘ವಾಲ್​’ ಅರ್ಥಾತ್​ ದಿಗ್ಗಜ ಬ್ಯಾಟರ್​ ರಾಹುಲ್​ ದ್ರಾವಿಡ್​. ಇದೀಗ ಇವೆರಡೂ ಗೋಡೆಗಳು ಒಂದಾಗಿವೆ. ಅಂದರೆ ಅಮಿತಾಭ್​ ಬಚ್ಚನ್​ ‘ದೀವಾರ್​’ ಕಾಣಿಸಿಕೊಂಡಿರುವ ಜನಪ್ರಿಯ ಸ್ಟೈಲ್​ನಲ್ಲಿ ಈಗ ರಾಹುಲ್​ ದ್ರಾವಿಡ್​ ಕೂಡ ಕಾಣಿಸಿಕೊಂಡು ಗಮನಸೆಳೆದಿದ್ದಾರೆ.

    ಡ್ರೈ-ಫ್ರುಟ್ಸ್​​ ಮತ್ತು ನಟ್ಸ್​ ಕಂಪನಿ ‘ಫಾಮ್ರ್ಲಿ’ಯ ಜಾಹೀರಾತಿನಲ್ಲಿ ದ್ರಾವಿಡ್​, ಬಚ್ಚನ್​ ಸ್ಟೈಲ್​ ಅನುಕರಣೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಾಹೀರಾತಿನ ಲುಕ್​ ಮಾತ್ರವಲ್ಲದೆ ಧ್ವನಿಯಲ್ಲೂ ಬಚ್ಚನ್​ ಅವರನ್ನು ಅನುಕರಣೆ ಮಾಡಲು ದ್ರಾವಿಡ್​ ಯತ್ನಿಸಿರುವುದು ವಿಶೇಷವೆನಿಸಿದೆ.

    ಈ ಮುನ್ನ ದ್ರಾವಿಡ್​ ಕ್ರೆಡ್​ ಕಂಪನಿಯ ಜಾಹೀರಾತಿನಲ್ಲಿ ‘ಇಂದಿರಾನಗರದ ಗೂಂಡಾ’ ಸ್ಟೈಲ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಎಂದಿನ ಶಾಂತ ಸ್ವಭಾವಕ್ಕೆ ಬದಲಾಗಿ ಅವರು ಆವಾಜ್​ ಹಾಕಿ ಗೂಂಡಾಗಿರಿ ಪ್ರದರ್ಶಿಸುವ ಮೂಲಕ ಗಮನಸೆಳೆದಿದ್ದರು.

    ಅಂದು ಕ್ರಿಕೆಟ್​ ಪಂದ್ಯ ಪ್ರಸಾರಕ್ಕೆ 5 ಲಕ್ಷ ರೂ. ಕೇಳಿತ್ತು ದೂರದರ್ಶನ! ಇಂದು ಪ್ರಸಾರ ಹಕ್ಕು ಖರೀದಿಗೆ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts