More

    ಅಂದು ಕ್ರಿಕೆಟ್​ ಪಂದ್ಯ ಪ್ರಸಾರಕ್ಕೆ 5 ಲಕ್ಷ ರೂ. ಕೇಳಿತ್ತು ದೂರದರ್ಶನ! ಇಂದು ಪ್ರಸಾರ ಹಕ್ಕು ಖರೀದಿಗೆ ಪೈಪೋಟಿ!

    ಬೆಂಗಳೂರು: ಕ್ರಿಕೆಟ್​ ಆಟ ಈಗ ಶ್ರೀಮಂತವಾಗಿ ಬೆಳೆದಿದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಿಸಿಸಿಐ ಅಂದು ತೆಗೆದುಕೊಂಡ ಆ ಒಂದು ಖಡಕ್​ ನಿರ್ಧಾರ. ಅದುವೇ ಭಾರತ ತಂಡದ ತವರಿನ ಪಂದ್ಯಗಳ ಪ್ರಸಾರ ಹಕ್ಕು ಮಾರಾಟ ಮಾಡುವುದು. ಅದರ ಫಲವಾಗಿ ಈಗ ಬಿಸಿಸಿಐ ಖಜಾನೆಗೆ ಸಾವಿರಾರು ಕೋಟಿ ಹಣದ ಪ್ರವಾಹ ಹರಿದು ಬರುತ್ತಿದೆ. ಕ್ರಿಕೆಟ್​ ಪಂದ್ಯಗಳ ನೇರಪ್ರಸಾರ ಹಕ್ಕು ಮಾರಾಟದ ಮೌಲ್ಯವೇನೆಂದು ಬಿಸಿಸಿಐ ತಿಳಿದುಕೊಳ್ಳಲು, ದೂರದರ್ಶನ ಅಂದು ಇಟ್ಟ ಆ ಒಂದು ಬೇಡಿಕೆಯೇ ಮುಖ್ಯ ಕಾರಣವಾಗಿತ್ತು. ಇದರಿಂದ ಬಿಸಿಸಿಐಗೆ ತನ್ನೊಳಗಿನ ಶಕ್ತಿಯ ಅರಿವಾಯಿತು!

    ಮೊದಲಿಗೆ ದೇಶದ ಏಕೈಕ ಪ್ರಸಾರ ವಾಹಿನಿಯಾಗಿದ್ದ ದೂರದರ್ಶನ ಉಚಿತವಾಗಿಯೇ ಭಾರತೀಯ ಕ್ರಿಕೆಟ್​ ತಂಡದ ಪಂದ್ಯಗಳನ್ನು ಪ್ರಸಾರ ಮಾಡುತಿತ್ತು. ಆದರೆ, 1992ರಲ್ಲಿ ಭಾರತ ತಂಡದ ಕ್ರಿಕೆಟ್​ ಪಂದ್ಯವೊಂದನ್ನು ಪ್ರಸಾರ ಮಾಡಲು ದೂರದರ್ಶನ, 5 ಲಕ್ಷ ರೂ. ಮೊತ್ತವನ್ನು ಬಿಸಿಸಿಐ ಕೇಳಿತ್ತು. ಇದು ಪಂದ್ಯ ಪ್ರಸಾರದ ಖರ್ಚುವೆಚ್ಚಕ್ಕೆ ಬೇಕಾಗುತ್ತದೆ ಎಂದಿತ್ತು.

    ಇದರ ಬೆನ್ನಲ್ಲೇ ಕ್ರಿಕೆಟ್​ ಪಂದ್ಯಗಳ ಪ್ರಸಾರ ಹಕ್ಕು ಮಾರಾಟಕ್ಕೆ ಮುಂದಾಗಿದ್ದ ಬಿಸಿಸಿಐ, 1993ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್​ ವಿರುದ್ಧದ ಸರಣಿಯ ಪಂದ್ಯಗಳ ಪ್ರಸಾರ ಹಕ್ಕನ್ನು ಟ್ರಾನ್ಸ್​ ವರ್ಲ್ಡ್​ ಇಂಟರ್​ನ್ಯಾಷನಲ್​ (ಟಿಡಬ್ಲ್ಯುಐ) ಕಂಪನಿಗೆ ಮಾರಿತ್ತು. ಇದರಿಂದಾಗಿ ದೂರದರ್ಶನ, ಟಿಡಬ್ಲ್ಯುಐಗೆ ಸುಮಾರು 3 ಕೋಟಿ ರೂ. ನೀಡಿ ಭಾರತದಲ್ಲಿ ಪಂದ್ಯ ಪ್ರಸಾರದ ಹಕ್ಕು ಪಡೆದುಕೊಂಡಿತು. ಈ ಮೊದಲ ಪ್ರಸಾರ ಹಕ್ಕು ಒಪ್ಪಂದದಿಂದ ಬಿಸಿಸಿಐಗೆ ಒಟ್ಟು 1.82 ಕೋಟಿ ರೂ. ಆದಾಯ ಬಂದಿತ್ತು. ತವರಿನ 1996ರ ವಿಶ್ವಕಪ್​ ಯಶಸ್ಸಿನ ನಂತರದಲ್ಲಿ ಭಾರತದಲ್ಲಿ ಕ್ರಿಕೆಟ್​ ಪ್ರಸಾರ ಹಕ್ಕು ಹೆಚ್ಚಿನ ಬೇಡಿಕೆ ಪಡೆಯಲಾರಂಭಿಸಿತು. 1999ರಲ್ಲಿ ಬಿಸಿಸಿಐ ದೂರದರ್ಶನದ ಜತೆ ಪ್ರತಿ ವರ್ಷಕ್ಕೆ 54 ಕೋಟಿ ರೂ.ನಂತೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ನಂತರದಲ್ಲಿ ಖಾಸಗಿ ಚಾನಲ್​ಗಳಿಗೆ ಪ್ರಸಾರ ಹಕ್ಕು ಮಾರಾಟವಾಗತೊಡಗಿತು. ಇದೀಗ 2023-2028ರ ಸಾಲಿನ 5 ವರ್ಷಗಳ ಪ್ರಸಾರ ಹಕ್ಕು ಮಾರಾಟದಿಂದ ಬಿಸಿಸಿಐ ಬರೋಬ್ಬರಿ 5963 ಕೋಟಿ ರೂ. ಆದಾಯ ಗಳಿಸಿದೆ.

    ಭಾರತದಲ್ಲಿನ ಕ್ರಿಕೆಟ್​ ಸರಣಿಗಳ ಪ್ರಸಾರ ಹಕ್ಕು ‘ವಯಾಕಾಮ್​18’ ಪಾಲು; ಬಿಸಿಸಿಐಗೆ ಜಾಕ್​ಪಾಟ್​

    ಹಿಂದಿಗಿಂತ ದುಬಾರಿಯಾದರೂ, ಐಪಿಎಲ್​ ದಾಖಲೆ ಸರಿಗಟ್ಟಲಿಲ್ಲ ಟೀಮ್​ ಇಂಡಿಯಾ ಪಂದ್ಯಗಳ ಮೌಲ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts