More

    ಭಾರತದಲ್ಲಿನ ಕ್ರಿಕೆಟ್​ ಸರಣಿಗಳ ಪ್ರಸಾರ ಹಕ್ಕು ‘ವಯಾಕಾಮ್​18’ ಪಾಲು; ಬಿಸಿಸಿಐಗೆ ಜಾಕ್​ಪಾಟ್​

    ಮುಂಬೈ: ಭಾರತದಲ್ಲಿ ಮುಂದಿನ 5 ವರ್ಷಗಳ ಕಾಲ ನಡೆಯಲಿರುವ ದ್ವಿಪಯ ಕ್ರಿಕೆಟ್​ ಸರಣಿಗಳ ನೇರಪ್ರಸಾರ ಹಕ್ಕು ರಿಲಯನ್ಸ್​ ಸಮೂಹದ ಮಾಧ್ಯಮ ಸಂಸ್ಥೆ ‘ವಯಾಕಾಮ್​18’ಗೆ ಒಲಿದಿದೆ. ಬಿಸಿಸಿಐ ಗುರುವಾರ ನಡೆಸಿದ ಪ್ರಸಾರ ಹಕ್ಕಿನ ಇ-ಹರಾಜಿನಲ್ಲಿ ವಯಾಕಾಮ್​18, ಟಿವಿ ಮತ್ತು ಡಿಜಿಟಲ್​ ಹಕ್ಕುಗಳೆರಡನ್ನೂ ಒಟ್ಟು 5,963 ಕೋಟಿ ರೂ. ಮೊತ್ತಕ್ಕೆ ಗೆದ್ದುಕೊಂಡಿತು. ಇದರನ್ವಯ ಟೀಮ್​ ಇಂಡಿಯಾದ ತವರಿನ ಪಂದ್ಯಗಳು ಈಗ 67.8 ಕೋಟಿ ರೂ. ಮೌಲ್ಯ ಪಡೆದುಕೊಂಡಿದೆ. ಇದು ಕಳೆದ 5 ವರ್ಷಗಳ ಒಪ್ಪಂದಕ್ಕಿಂತ ಶೇ. 12.92 ಅಂದರೆ 7.8 ಕೋಟಿ ರೂ. ಅಧಿಕವಾಗಿದೆ.

    ಬಿಸಿಸಿಐ ಇದೇ ಮೊದಲ ಬಾರಿಗೆ ಟಿವಿ-ಡಿಜಿಟಲ್​ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಿದ್ದರೂ, ಎರಡೂ ವಯಾಕಾಮ್​18 ಪಾಲಾಗಿವೆ. ಡಿಜಿಟಲ್​ ಹಕ್ಕು 3,101 ಕೋಟಿ ರೂ.ಗಳಿಗೆ ಮತ್ತು ಟಿವಿ ಹಕ್ಕು 2,862 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಇದರನ್ವಯ ಪ್ರತಿ ಪಂದ್ಯದ ಟಿವಿ ಪ್ರಸಾರ ಹಕ್ಕು 32.5 ಕೋಟಿ ರೂ. ಮತ್ತು ಡಿಜಿಟಲ್​ ಪ್ರಸಾರ ಹಕ್ಕು 35.3 ಕೋಟಿ ರೂ. ಮೌಲ್ಯ ಪಡೆದಿದೆ.

    ಆಸ್ಟ್ರೆಲಿಯಾ ವಿರುದ್ಧ ಸೆಪ್ಟೆಂಬರ್​ 22ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯೊಂದಿಗೆ ಹೊಸ ಪ್ರಸಾರ ಹಕ್ಕು ಒಪ್ಪಂದ ಶುರುವಾಗಲಿದ್ದು, 2028ರ ಮಾರ್ಚ್​ವರೆಗೆ ಅನ್ವಯಿಸಲಿದೆ. ಈ ಅವಧಿಯಲ್ಲಿ ಭಾರತ ತಂಡ ಒಟ್ಟು 88 ಪಂದ್ಯಗಳನ್ನು (25 ಟೆಸ್ಟ್​, 27 ಏಕದಿನ, 36 ಟಿ20) ಆಡಲಿದೆ.
    ಪ್ರಸಾರ ಹಕ್ಕು ಇ-ಹರಾಜಿನ ಪೈಪೋಟಿಯಲ್ಲಿ ಡಿಸ್ನಿ ಸ್ಟಾರ್​ ಮತ್ತು ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ಗಳನ್ನು ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮಾಲೀಕತ್ವದ ‘ವಯಾಕಾಮ್​18’ ಕಂಪನಿ ಹಿಮ್ಮೆಟ್ಟಿಸಿತು. ಈಗಾಗಲೆ ಐಪಿಎಲ್​ನ ಡಿಜಿಟಲ್​ ಪ್ರಸಾರ ಹಕ್ಕು (23,758 ಕೋಟಿ ರೂ) ಮತ್ತು ಮಹಿಳೆಯರ ಐಪಿಎಲ್​ ಖ್ಯಾತಿಯ ‘ಡಬ್ಲ್ಯುಪಿಎಲ್​’ (951 ಕೋಟಿ ರೂ.) ಪ್ರಸಾರ ಹಕ್ಕು ವಯಾಕಾಮ್​18 ಬಳಿ ಇತ್ತು. ವಯಾಕಾಮ್​18 ಒಡೆತನದ ‘ಸ್ಪೋರ್ಟ್ಸ್​18’ ಟಿವಿ ಚಾನಲ್​ ಮತ್ತು ‘ಜಿಯೋಸಿನಿಮಾ’ ಒಟಿಟಿಯಲ್ಲಿ ಇನ್ನು ಟೀಮ್​ ಇಂಡಿಯಾದ ತವರಿನ ಪಂದ್ಯಗಳೂ ನೇರಪ್ರಸಾರ ಕಾಣಲಿವೆ. ವಯಾಕಾಮ್​18ಗೆ ಹೊಸ ಪ್ರಸಾರ ಹಕ್ಕು ವಿತರಿಸಿರುವುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಸಾಮಾಜಿಕ ಜಾಲತಾಣ “ಎಕ್ಸ್​’ನಲ್ಲಿ ಪ್ರಕಟಿಸಿದ್ದಾರೆ.

    ತಲೆಗೂದಲು ಕಸಿ ಮಾಡಿಸಿಕೊಂಡು ಏಷ್ಯಾಕಪ್​ಗೆ ಸಜ್ಜಾದ ಟೀಮ್​ ಇಂಡಿಯಾ ವೇಗಿ ಶಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts