

ಚೆನ್ನೈ: ಭಾರತ ತಂಡಕ್ಕೆ ಆಟಗಾರರ ಆಯ್ಕೆ ವಿಚಾರದಲ್ಲಿ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಪ್ರಾದೇಶಿಕ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಎಸ್. ಬದ್ರಿನಾಥ್ ಆರೋಪಿಸಿದ್ದಾರೆ. ಶುಭಮಾನ್ ಗಿಲ್ ಸತತ ವೈಫಲ್ಯ ಕಾಣುತ್ತಿದ್ದರೂ ಅವರಿಗೆ ಸುದೀರ್ ಅವಕಾಶವನ್ನು ನೀಡಲಾಗುತ್ತಿದೆ. ಅವರೇನಾದರೂ ತಮಿಳುನಾಡಿನ ಆಟಗಾರರಾಗಿದ್ದರೆ ಈಗಾಗಲೆ ತಂಡದಿಂದ ಹೊರಬಿದ್ದಿರುತ್ತಿದ್ದರು ಎಂದು ಬದ್ರಿನಾಥ್ ದೂರಿದ್ದಾರೆ.
ಗಿಲ್ ಕಳೆದ ಬಾರ್ಡರ್&ಗಾವಸ್ಕರ್ ಟ್ರೋಫಿಯಲ್ಲಿ 18.60ರ ಸರಾಸರಿಯಲ್ಲಿ ಕೇವಲ 93 ರನ್ ಗಳಿಸಿದ್ದರು. "ಒಂದು ವೇಳೆ ರನ್ ಗಳಿಸದಿದ್ದರೆ, ಬೌಲರ್ಗಳನ್ನು ಸತಾಯಿಸಿ ಚೆಂಡನ್ನು ಹಳೆಯದಾಗಿಸುವ ಪ್ರಯತ್ನವನ್ನಾದರೂ ಮಾಡಬೇಕು. ಇದು ತಂಡದ ಇತರ ಆಟಗಾರರಿಗಾದರೂ ರನ್ ಗಳಿಸಲು ನೆರವಾಗುತ್ತದೆ. ಇದೂ ತಂಡಕ್ಕೆ ಉತ್ತಮ ಕೊಡುಗೆಯೇ ಆಗುತ್ತದೆ. ಲಬುಶೇನ್, ಮೆಕ್ಸ್ವೀನ್ ಆಸೀಸ್ ಪರ ಇಂಥದ್ದೇ ಕೆಲಸ ಮಾಡಿದರು. ಹೆಚ್ಚಿನ ಡಾಟ್ಬಾಲ್ ಆಡುವ ಮೂಲಕ ಅವರು ಬುಮ್ರಾ ಗಾಯಗೊಳ್ಳುವಂತೆ ಮಾಡಿದರು. ಗಿಲ್ ಇಂಥದ್ದೇ ಕೆಲಸ ಮಾಡಬೇಕಾಗಿತ್ತು' ಎಂದು ಬದ್ರಿನಾಥ್ ವಿವರಿಸಿದ್ದಾರೆ.
ಕಳೆದ ವರ್ಷಾರಂಭದಿಂದ ವಿದೇಶದಲ್ಲಿ ಆಡಿರುವ 7 ಟೆಸ್ಟ್ಗಳಲ್ಲಿ ಒಂದೂ ಶತಕ ಅಥವಾ ಅರ್ಧಶತಕ ಬಾರಿಸಿಲ್ಲ ಮತ್ತು ಕೇವಲ 139 ರನ್ ಗಳಿಸಿದ್ದಾರೆ.