ಟ್ರೋಫಿ ವಿತರಣೆಗೆ ಆಹ್ವಾನಿಸದ ಬಗ್ಗೆ ಗಾವಸ್ಕರ್​ ಬೇಸರ; ಕ್ರಿಕೆಟ್​ ಆಸ್ಟ್ರೇಲಿಯಾ ಸ್ಪಷ್ಟನೆ ಹೀಗಿದೆ…

blank

ಸಿಡ್ನಿ: ತನ್ನದೇ ಹೆಸರು ಹೊಂದಿರುವ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಅಂತ್ಯದಲ್ಲಿ ಟ್ರೋಫಿ ವಿತರಣೆಯ ವೇಳೆ ಆತಿಥೇಯ ಆಸ್ಟ್ರೆಲಿಯಾ ತನ್ನನ್ನು ವೇದಿಕೆಗೆ ಕರೆಯದ ಬಗ್ಗೆ ಭಾರತದ ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಬೇಸರ ವ್ಯಕ್ತಪಡಿಸಿದ್ದಾರೆ.

blank

ವೀಕ್ಷಕ ವಿವರಣೆಕಾರರಾಗಿ ಮೈದಾನದಲ್ಲೇ ಹಾಜರಿದ್ದರೂ ತನ್ನನ್ನು ಕಡೆಗಣಿಸಿದ ಬಗ್ಗೆ ಅವರು ಅಸಮಾಧಾನ ತೋಡಿಕೊಂಡಿದ್ದಾರೆ. “ಪ್ರಶಸ್ತಿ ವಿತರಣೆಯ ವೇಳೆ ಹಾಜರಿರಲು ನಾನು ಖುಷಿಪಡುತ್ತಿದ್ದೆ. ಯಾಕೆಂದರೆ ಅದು ಬಾರ್ಡರ್​&ಗಾವಸ್ಕರ್​ ಟ್ರೋಫಿ. ಭಾರತ-ಆಸೀಸ್​ ನಡುವಿನ ಸರಣಿ. ಆಸೀಸ್​ ಸರಣಿ ಗೆದ್ದಿದ್ದರೂ, ಟ್ರೋಫಿ ವಿತರಿಸಲು ನನಗೆ ಸಂಕೋಚ ಇರಲಿಲ್ಲ. ಅವರು ಉತ್ತಮ ಕ್ರಿಕೆಟ್​ ಆಡಿ ಗೆದ್ದರು. ನಾನೋರ್ವ ಭಾರತೀಯನಾಗಿರುವ ಕಾರಣಕ್ಕಾಗಿ ಕಡೆಗಣಿಸಬಾರದಿತ್ತು. ಗೆಳೆಯ ಅಲನ್​ ಬಾರ್ಡರ್​ ಜತೆಗೂಡಿ ಟ್ರೋಫಿ ವಿತರಿಸಲು ಖುಷಿಪಡುತ್ತಿದ್ದೆ’ ಎಂದು ಗಾವಸ್ಕರ್​ ಹೇಳಿದ್ದಾರೆ.

ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ “ಕ್ರಿಕೆಟ್​ ಆಸ್ಟ್ರೆಲಿಯಾ’ (ಸಿಎ), ಭಾರತ ತಂಡ ಗೆದ್ದಿದ್ದರೆ ಮಾತ್ರ ಟ್ರೋಫಿ ವಿತರಣೆಗೆ ಗಾವಸ್ಕರ್​ರನ್ನು ಕರೆಯುವ ಯೋಜನೆ ನಮ್ಮದಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಸಿಡ್ನಿ ಟೆಸ್ಟ್​ ಮೊದಲ ದಿನದಂತ್ಯಕ್ಕೆ ಬುಮ್ರಾ-ಕಾನ್​ಸ್ಟಾಸ್​ ಜಟಾಪಟಿ, ಒಗ್ಗಟ್ಟಾದ ಭಾರತ!

TAGGED:
Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank