

ಬೆಂಗಳೂರು: ಹಾಲಿ IPL ಋತುವಿನಲ್ಲಿ ಫ್ರಾಂಟೈಸಿಗಳಿಗೆ ಗಾಯದ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು ಬದಲಿ ಆಟಗಾರರ ಹುಡುಕಾಟದಲ್ಲಿ ತೊಡಗಿವೆ.
ಇನ್ನು RCB ತಂಡಕ್ಕೂ ಹಾಯದ ಸಮಸ್ಯೆ ಕಾಡುತ್ತಿದ್ದು ಹಿಮ್ಮಡಿ ಸಮಸ್ಯೆ ಇಂದ ಬಲಗೈ ಬ್ಯಾಟರ್ ರಜತ್ ಪಾಟೀದಾರ್ ಈ ಬಾರಿಯ IPLನಿಂದ ಹೊರಬಿದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ವೇಗಿ ರೀಸ್ ಟಾಪ್ಲಿ ಕೈಗೆ ಗಾಯ ಮಾಡಿಕೊಂಡಿದ್ದು ಅವರು ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಗಾಯಗೊಂಡಿರುವ ರೀಸ್ ಟಾಪ್ಲಿ ಬದಲಿಗೆ ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್ ಪಾರ್ನೆಲ್, ರಜತ್ ಪಾಟೀದಾರ್ ಬದಲಿಗೆ ಕರ್ನಾಟಕ ಮೂಲದ ವೇಗಿ ವೈಶಾಕ್ ವಿಜಯ್ ಕುಮಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬದಲಿ ಆಟಗಾರರನ್ನಾಗಿ ನೇಮಿಸಿಕೊಂಡಿದೆ.
ದಕ್ಷಿಣ ಆಪ್ರಿಕಾ ಪರ 56 ಟಿ-20 ಪಂದ್ಯಗಳನ್ನು ಆಡಿರುವ ಪಾರ್ನೆಲ್ 73 ವಿಕೆಟ್ ಕಬಳಿಸಿದ್ದಾರೆ. IPLನಲ್ಲಿ 26 ಪಂದ್ಯಗಳನ್ನು ಆಡಿರುವ ಪಾರ್ನೆಲ್ ಅವರನ್ನು RCB ತಂಡವು 75 ಲಕ್ಷ ರೂಪಾಯಿಗಳನ್ನು ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.
ಕರ್ನಾಟಕ ಮೂಲದ ವೇಗಿ ವೈಶಾಕ್ ವಿಜಯ್ ಕುಮಾರ್ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ 14 ಟಿ-20 ಪಂದ್ಯಗಳನ್ನು ಆಡಿದ್ದು 22 ವಿಕೆಟ್ ಕಬಳಿಸಿದ್ದಾರೆ. ವೈಶಾಕ್ ಅವರನ್ನು RCB ತಂಡವು 20 ಲಕ್ಷ ರೂಪಾಯಿಗಳನ್ನು ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.