

ಕೊಲ್ಕತ: ಬಲಗೈ ಬ್ಯಾಟ್ಸ್ಮ್ಯಾನ್ ಶ್ರೇಯಸ್ ಅಯ್ಯರ್, ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕಿಬ್ ಅಲ್ ಹಸನ್ ಈ ಬಾರಿಯ IPL ಟೂರ್ನಿಗೆ ಅಲಭ್ಯರಾಗಿದ್ದು KKR ಫ್ರಾಂಚೈಸಿ ಬದಲಿ ಆಟಗಾರನನ್ನು ತಂಡಕ್ಕೆ ನೇಮಿಸಿದೆ.
ಸುದ್ದಿ ಮೂಲಗಳ ಪ್ರಕಾರ ಇಂಗ್ಲೆಂಡ್ ತಂಡದ ಆರಂಭಿಕ ಜೇಸನ್ ರಾಯ್ ಅವರ ಜೊತೆ ತಂಡ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಆದರೆ, ಬದಲಿ ಆಟಘಾರರನ್ನು ಯಾರ ಬದಲಿದೆ ನೇಮಿಸಿಕೊಳ್ಳಲಾಗಿದೆ ಎಂಬುದನ್ನು ತಂಡದ ಮ್ಯಾನೇಜ್ಮೆಂಟ್ ಇನ್ನು ಸ್ಪಷ್ಟಪಡಿಸಿಲ್ಲ.
ಇಂಗ್ಲೆಂಡ್ ಪರ 64 T-20 ಪಂದ್ಯಗಳನ್ನಾಡಿರುವ ಜೇಸನ್ ರಾಯ್ 137.61ರ ಸರಾಸರಿಯಲ್ಲಿ 1522ರನ್ ಗಳಿಸಿದ್ಧಾರೆ. 2021ರಲ್ಲಿ IPLನಲ್ಲಿ ಕಡೆಯದಾಗಿ ಸನ್ರೈರ್ಸ್ ಪರ ಆಡಿದ್ದ ರಾಯ್ 150 ರನ್ ಗಳಿಸಿದ್ದರು. ‘
ಈಗಾಗಲೇ ಅಂತರಾಷ್ಟ್ರೀಯ ಸರಣಿ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಶಕಿಬ್ ಅಲ್ ಹಸನ್ ಅಲಭ್ಯರಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆ ಪರಿಣಾಮ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕಾರೆಣ ಶ್ರೇಯಸ್ ಅಯ್ಯರ್ IPL ಹಾಗೂ WTC ಫಿನಾಲೆಯಿಂದ ಹೊರಗುಳಿಯಲಿದ್ದಾರೆ.