ಏನ್ರೀ 'ಕಿಂಗ್ ಕೊಹ್ಲಿ' ಆಟ? ಕೇಳಲಾಗ್ತಿಲ್ಲ ಫ್ಯಾನ್ಸ್ ಚೀರಾಟ! ಗಿಲ್ ಪಡೆಗೆ ಸೋಲುಣಿಸಿದ ಆರ್​ಸಿಬಿ​

WhatsApp Image 2024-04-28 at 6.51.40 PM
Published on

ಗುಜರಾತ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 45ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಭಾರೀ ಅಂತರದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎದುರು ಹೀನಾಯ ಸೋಲು ಅನುಭವಿಸಿತು.

ಮೊದಲು ಬ್ಯಾಟ್ ಮಾಡಿದ ಶುಭಮನ್ ಗಿಲ್ ಪಡೆ 20 ಓವರ್​ಗಳಲ್ಲಿ 201 ರನ್ ಕಲೆಹಾಕುವ ಮೂಲಕ ಆರ್​ಸಿಬಿಗೆ ಬೃಹತ್ ರನ್​ ಅನ್ನು ಚೇಸ್​ ಮಾಡುವಂತೆ ಸವಾಲು ಹಾಕಿತು. ಈ ಚಾಲೆಂಜ್ ಬೆನ್ನಟ್ಟಿದ ಆರ್​ಸಿಬಿಗೆ ವಿರಾಟ್​ ಕೊಹ್ಲಿ ಮತ್ತು ವಿಲ್​ ಜ್ಯಾಕ್ಸ್ ಸ್ಪೋಟಕ ಬ್ಯಾಟಿಂಗ್ 16ನೇ ಓವರ್​ಗೆ ಪಂದ್ಯವನ್ನು ವಶಪಡಿಸಿಕೊಳ್ಳುವಂತೆ ಮಾಡಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ, ಗುಜರಾತ್​ ಟೈಟನ್ಸ್​ಗೆ ಬ್ಯಾಟಿಂಗ್ ಮಾಡುವಂತೆ ತಿಳಿಸಿತು. ಅದರಂತೆಯೇ ಸ್ಪೋಟಕ ಬ್ಯಾಟಿಂಗ್ ಮಾಡಿ, ತಂಡಕ್ಕೆ 200 ರನ್​ಗಳನ್ನು ಕಲೆಹಾಕಿತು. ಆರ್​ಸಿಬಿಗೆ ಈ ಬೃಹತ್ ಗುರಿಯನ್ನು ಚೇಸ್​ ಮಾಡುವಂತೆ ಸವಾಲು ಹಾಕಿತು. 201 ರನ್​ಗಳನ್ನು ಬೆನ್ನಟ್ಟುವ ಭರದಲ್ಲಿ ಫಾಫ್​ ಕೇವಲ 24 ರನ್​ಗೆ ಪೆವಿಲಿಯನ್​ನತ್ತ ಮುಖಮಾಡಿದರು. ಆದರೆ, ಇದೇ ಸೋಲಿಗೆ ಕಾರಣವಾಗಲು ಬಿಡುವುದಿಲ್ಲ ಎಂದು ಕ್ರೀಸ್​ಗೆ ಅಂಟಿಕೊಂಡ ವಿರಾಟ್ ಮತ್ತು ಜ್ಯಾಕ್ಸ್​ ಭರ್ಜರಿ ಜತೆಯಾಟ ಆಡುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net