IPL 2023| ಕೊಹ್ಲಿ ಫಿಫ್ಟಿ-ಬೌಲರ್​ಗಳ ಸಂಘಟಿತ ದಾಳಿ; RCBಗೆ 23 ರನ್​ ಜಯ

RCB
Published on

ಬೆಂಗಳೂರು: ಬ್ಯಾಟ್ಸ್​ಮ್ಯಾನ್​ ವಿರಾಟ್​ ಕೊಹ್ಲಿ ಹಾಗು ಬೌಲರ್​ಗಳು ನಡೆಸಿದ ಸಂಘಟಿತ ದಾಳಿಯ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 23ರನ್​ಗಳ ಜಯ ಸಾಧಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ RCB ತಂಡವು 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 174ರನ್​ ಗಳಿಸಿತ್ತು.

ಕೊಹ್ಲಿ-ಪ್ಲೆಸಿಸ್​ ಬಿರುಸಿನ ಆಟ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ RCB ತಂಡವು ವಿರಾಟ್​ ಕೊಹ್ಲಿ(50 ರನ್​, 34 ಎಸೆತ, 6 ಬೌಂಡರಿ, 1ಸಿಕ್ಸರ್​​), ನಾಯಕ ಫಾಪ್​ ಡು ಪ್ಲೆಸಿಸ್​(22 ರನ್​, 16 ಎಸೆತ, 3 ಬೌಂಡರಿ, 1 ಸಿಕ್ಸರ್​) ಬಿರುಸಿನ ಆಟದ ಫಲವಾಗಿ ಮೊದಲ ವಿಕೆಟ್​ಗೆ 4.4ಓವರ್​ಗಳಲ್ಲಿ 42ರನ್​ ಪೇರಿಸಿ ಬೇರ್ಪಟ್ಟಿತ್ತು.

ನಾಯಕ ಪ್ಲೆಸಿಸ್-ಕೊಹ್ಲಿ​ ಔಟಾದ ಬಳಿಕ ಬಂದ ಬ್ಯಾಟ್ಸ್​ಮ್ಯಾನ್​ಗಳು ಕೆಲಕಾಲ ಸ್ಪೋಟಕ ಆಟದ ಫಲವಾಗಿ 6 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 174ರನ್​ ಗಳಿಸಿತ್ತು.

ಡೆಲ್ಲಿಗೆ ಆರಂಭಿಕ ಆಘಾತ

ಗುರಿ ಬೆನ್ನತ್ತಿದ್ದ ಡೆಲ್ಲಿಕ್ಯಾಪಿಟಲ್ಸ್​ ತಂಡಕ್ಕೆ RCB ಬೌಲರ್​ಗಳು ಆರಂಭಿಕ ಆಘಾತ ನೀಡಿದರು. ಅಲ್ಪಮೊತ್ತಕ್ಕೆ ತಂಡ ಕುಸಿಯುವ ಭೀತಿಯಲ್ಲಿದ್ದ ಸಮಯದಲ್ಲಿ ಕನ್ನಡಿಗ ಮನೀಷ್​ ಪಾಂಡೆ(50 ರನ್​, 38ಎಸೆತ, 5ಬೌಂಡರಿ, 1ಸಿಕ್ಸರ್​) ಅರ್ಧಶತಕದ ಫಲವಾಗಿ ಡೆಲ್ಲಿ ತಂಡವು 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 151ರನ್​ಗಳಿಸಿತ್ತು.

RCB ಪರ ಮೊಹಮ್ಮದ್​ ಸಿರಾಜ್​(4-0-23-2), ವೇಯ್ನ್​​ ಪಾರ್ನೆಲ್​(4-0-28-1), ವಿಜಯ್​ಕುಮಾರ್​ ವೈಶಾಕ್​(4-0-20-3), ವನ್ನಿಂದು ಹಸರಂಗ(3-0-37-1), ಹರ್ಷಲ್​ ಪಟೇಲ್​(4-0-32-1) ರನ್​ ನೀಡಿ ವಿಕೆಟ್​ ಕಬಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net