IPL 2025ರ ಟ್ರೋಫಿ RCB ಪಾಲು; ವಿರಾಟ್​ ಪಂದ್ಯ ಶ್ರೇಷ್ಠ: ಶೇನ್ ವ್ಯಾಟ್ಸನ್ ಭವಿಷ್ಯ!

dk - 2025-05-29T205428.290
Published on

ಇಂಡಿಯನ್ ಪ್ರಿಮಿಯರ್ ಲೀಗ್​ (ಐಪಿಎಲ್) 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಅಲ್ಲದೆ, ಈ ಬಾರಿಯ ಟ್ರೋಫಿ ಗೆಲ್ಲುವುದರ ಜತೆಗೆ ಫೈನಲ್‌ನಲ್ಲಿ ವಿರಾಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ವಿನ್​​ ಆಗ್ತಾರೆ ಎಂದು ಮಾಜಿ ಆರ್‌ಸಿಬಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಭವಿಷ್ಯ ನುಡಿದಿದ್ದಾರೆ.

ಈ 18ನೇ ಆವೃತ್ತಿಯಲ್ಲಿ ಜೋಶ್​ ಹ್ಯಾಜಲ್​ವುಡ್​ ಆರ್​ಸಿಬಿಯಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಒಬ್ಬರು ಕಳೆದ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಮುಂದಿನ ಪಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಅವರ ಸಾಮರ್ಥ್ಯ ಮತ್ತೆ ಸಾಬಿತು ಮಾಡಲಿದ್ದಾರೆ ಎಂದು ಶೇನ್​ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಹಾಗೂ ಆರ್​ಸಿಬಿಗೆ ಇದು ಸರಿಯಾದ ಸಮಯ ಎಂದು ನನಗನಿಸುತ್ತದೆ.ಈ ಬಾರಿ ಆರ್​ಸಿಬಿ ಕಪ್​ ಗೆಲ್ಲುತ್ತದೆ. ವಿರಾಟ್​ ಪಂದ್ಯಶ್ರೇಷ್ಠರಾಗಿ ಹೊರ ಹೊಮ್ಮುತ್ತಾರೆ ಎಂದು ತಮ್ಮ ಎಕ್ಸ್​ ವೇದಿಕೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಲೀಗ್​ ಹಂತದಲ್ಲಿ RCB ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು. RCB ಒಂಬತ್ತು ಪಂದ್ಯಗಳನ್ನು ಗೆದ್ದು ನಾಲ್ಕು ಪಂದ್ಯಗಳನ್ನು ಸೋತರು. ಆದರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಮೊನ್ನೆ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ RCB ಸ್ಮರಣೀಯ ಗೆಲುವು ಸಾಧಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net