

RCB vs RR: ಇಂದು (ಏ.13) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ರಜತ್ ಪಟಿದಾರ್ ಪಡೆ, ಆರ್ಆರ್ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು.
ಅಂತೆಯೇ ಮೊದಲು ಬ್ಯಾಟ್ ಮಾಡಿದ ಆರ್ಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಬಹಳ ಬೇಗ ತಮ್ಮ ವಿಕೆಟ್ ಕಳೆದುಕೊಂಡು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಈ ವೇಳೆ ಕ್ರೀಸ್ಗೆ ಅಂಟಿ ನಿಂತ ಯಶಸ್ಬಿ ಜೈಸ್ವಾಲ್, 47 ಎಸೆತಗಳಲ್ಲಿ 77 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಲು ದೊಡ್ಡ ಕೊಡುಗೆ ನೀಡಿದರು.
ಜೈಸ್ವಾಲ್ಗೆ ಜತೆಯಾದ ರಿಯಾನ್ ಪರಾಗ್ 22 ಎಸೆತದಲ್ಲಿ 30 ರನ್ ಬಾರಿಸಿ ಔಟ್ ಆದರು. ಆರಂಭದಲ್ಲೇ ಆರ್ಆರ್ ಬ್ಯಾಟರ್ಗಳ ಕ್ಯಾಚ್ ಮಿಸ್ ಮಾಡಿದ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಮತ್ತು ಸುಯೇಶ್ ಶರ್ಮ, ಅಭಿಮಾನಿಗಳ ನಿರಾಶೆಗೆ ಕಾರಣರಾದರು. 20 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡ ರಾಜಸ್ಥಾನ ರಾಯಲ್ಸ್, 173 ರನ್ ಕಲೆಹಾಕಲಷ್ಟೇ ಶಕ್ತವಾಯಿತು.