RCB Vs CSK ಇದುವರೆಗೂ ಅತಿ ಹೆಚ್ಚು ಪಂದ್ಯ ಗೆದ್ದೋರ್ಯಾರು?; ಅಧಿಕ ಸಿಕ್ಸ್​ ಹೊಡೆದವರು ಯಾರು ಗೊತ್ತೆ?; ಇಲ್ಲಿದೆ ಎರಡು ತಂಡಗಳ ಕಂಪ್ಲೀಟ್​ ಡಿಟೇಲ್ಸ್​ ..

dk - 2025-03-28T122259.271
Published on

ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB)- ಚೈನ್ನೈ ಸೂಪರ್​ ಕಿಂಗ್ಸ್​(CSK) ನಡುವಿನ ಪಂದ್ಯವನ್ನು ಸಾಮಾನ್ಯವಾಗಿ ಹೈ-ವೀಲ್ಟೇಜ್​ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಎರಡು ತಂಡಗಳು ಅಪಾರವಾದ ಅಭಿಮಾನಿಗಳನ್ನು ಹೊಂದಿದೆ. ಅಲ್ಲದೆ, ಎರಡು ತಂಡಗಳಲ್ಲಿ ಪ್ರತಿ ಬಾರಿ ಬಲಿಷ್ಠ ಆಟಗಾರರನ್ನೇ ಹೊಂದಿದೆ. ಇದೀಗ ಈ 2 ತಂಡಗಳ ನಡುವೆ ಇಂದು ಸಂಜೆ(ಮಾ.28) ಕಾದಾಟ ಶುರುವಾಗಲಿದೆ. ಹೀಗಾಗಿ, ಈ ಹಿಂದಿನ ಪಂದ್ಯ ಎಲ್ಲಿ ನಡೆಯಿತು? ಗೆದ್ದೋರ್ಯಾರು? ಅತಿ ಹೆಚ್ಚು ಸಿಕ್ಸ್​ ಬಾರಿಸಿದವರ್ಯಾರು? ಎಂಬುದು ನೋಡೋಣ.

ಇದುವರೆಗಿನ ಮೈಲುಗೈ ಯಾರದ್ದು..?

ಅಂಕಿಅಂಶಗಳು ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಇದುವರೆಗೆ 33 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 21 ಬಾರಿ ಸೋಲಿಸಿದೆ. ಅದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 11 ಪಂದ್ಯಗಳನ್ನು ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗಳಿಸಿದ ಅತ್ಯಧಿಕ ಸ್ಕೋರ್ 226 ರನ್‌ಗಳು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗಳಿಸಿದ ಗರಿಷ್ಠ ಸ್ಕೋರ್ 218 ರನ್‌ಗಳು. ಆದಾಗ್ಯೂ, ಈ ಅಂಕಿಅಂಶಗಳಿಂದ ಸ್ಪಷ್ಟವಾಗುವುದೇನೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವುದು ಸುಲಭವಲ್ಲವಾದರೂ ಈ ಬಾರಿ ತಂಡದ ಬಲಿಷ್ಠತೆ ನೋಡಿದರೆ ಇಬ್ಬರ ನಡುವೆ ಪರಸ್ಪರ ಪೈಪೋಟಿ ಇದೆ.

ಕಳೆದ ಆವೃತ್ತಿಯಲ್ಲಿ ಆರ್ಸಿಬಿ 27 ರನ್​ಗಳ ಜಯ

ಎರಡೂ ತಂಡಗಳು ಕೊನೆಯ ಬಾರಿಗೆ ಕಳೆದ ಋತುವಿನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ನಂತರ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿತು. ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 27 ರನ್‌ಗಳಿಂದ ಜಯಗಳಿಸಿತು.

ಅತಿ ಸಿಕ್ಸ್​ ಬಾರಿಸಿದವರು ಯಾರು..?

ವಾಸ್ತವವಾಗಿ ಚೈನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ನಾಯಕ ಧೋನಿ ಅತಿಹೆಚ್ಚು ಸಿಕ್ಸ್​ ಬಾರಿಸುವಲ್ಲಿ ಆಗ್ರ ಸ್ಥಾನದಲ್ಲಿದ್ದಾರೆ. ಇದಕ್ಕೆ ತದ್ವಿರುದ್ಧ ಎಂಬಂತೆ ಆರ್​ಸಿಬಿ ತಂಡ ಕೂಡ ಹಿಂದೆ ಬಿದ್ದಿಲ್ಲ. ಅಂದರೆ ಧೋನಿ ಇದುವರೆಗೂ ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ 44 ಸಿಕ್ಸ್​ಗಳನ್ನು ಬಾರಿಸಿದ್ದರೆ. ಆರ್​ಸಿಬಿಯ ಸ್ಟಾರ್​ ಆಟಗಾರ ಕಿಂಗ್​ ಕೊಹ್ಲಿ 42 ಸಿಕ್ಸ್​ ಬಾರಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಎರಡು ತಂಡಗಳ ನಡುವಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಲಿಸ್ಟ್​ನಲ್ಲಿ ವಿರಾಟ್​ ಕೊಹ್ಲಿಯೇ ಮುಂದಿದ್ದಾರೆ. ಸಿಎಸ್​ಕೆ ವಿರುದ್ಧ ಕೊಹ್ಲಿ 76 ಬೌಂಡರಿಗಳನ್ನು ಹೊಡೆದಿದ್ದರೆ, ಆರ್​ಸಿಬಿ ವಿರುದ್ಧ ಸುರೇಶ್​ ರೈನಾ 54 ಬೌಂಡರಿ ಬಾರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net