

RCB : ಐಪಿಎಲ್ 18ನೇ ಆವೃತ್ತಿಯ ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಹೊಸತನದೊಂದಿಗೆ ಐಪಿಎಲ್ ಕಣಕ್ಕಿಳಿಯಲಿದೆ. ಎರಡು ದಿನಗಳ ಬಿಡ್ಡಿಂಗ್ನಲ್ಲಿ ಒಟ್ಟು 22 ಆಟಗಾರರು ಆರ್ಸಿಬಿ ಸೇರಿಕೊಂಡಿದ್ದಾರೆ. ಹಿಂದಿನ ತಂಡಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಆರ್ಸಿಬಿ ಕಂಪ್ಲೀಟ್ ಬದಲಾದಂತೆ ಕಾಣುತ್ತದೆ. ಬಹುತೇಕ ಹಳೆಯ ಆಟಗಾರರಿಗೆ ಗೇಟ್ಪಾಸ್ ನೀಡಲಾಗಿದೆ. ಈ ಬಾರಿ ಉತ್ತಮ ಬೌಲರ್ಗಳಿಗೆ ಮನ್ನಣೆ ನೀಡಿದ್ದು, ಸಮತೋಲಿತ ತಂಡವಾಗಿ ರೂಪುಗೊಂಡಿದೆ. ಆರ್ಸಿಬಿ ಅಭಿಮಾನಿಗಳು ಕೂಡ ತುಂಬಾ ಖುಷಿಯಾಗಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ವಿಶ್ವ ಟಿ20ಯ ನಂಬರ್ 2 ಬ್ಯಾಟ್ಸ್ಮನ್ ಫಿಲ್ ಸಾಲ್ಟ್, ಆಸ್ಟ್ರೇಲಿಯದ ಜೋಶ್ ಹ್ಯಾಸಲ್ವುಡ್ ಹಾಗೂ ಟಿಮ್ ಡೇವಿಡ್ ಆರ್ಸಿಬಿ ಬಳಗ ಸೇರಿದ್ದಾರೆ.
ಜೋಶ್ ಹ್ಯಾಸಲ್ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮ (11 ಕೋಟಿ), ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ), ರಸಿಕ್ ಸಲಾಂ (6 ಕೋಟಿ), ಸುಯಶ್ ಶರ್ಮ (2.60 ಕೋಟಿ). ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಟಿಮ್ ಡೇವಿಡ್ (3 ಕೋಟಿ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ನುವಾನ್ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್ (1.50 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಮನೋಜ್ ಭಾಂಡಗೆ (30 ಲಕ್ಷ), ಸ್ವಸ್ತಿಕ್ ಚಿಕರ (30 ಲಕ್ಷ), ಮೋಹಿತ್ ರಾಥೀ (30 ಲಕ್ಷ), ಅಭಿನಂದನ್ ಸಿಂಗ್ (30 ಲಕ್ಷ), ಲುಂಗಿ ಎನ್ಗಿಡಿ (1 ಕೋಟಿ).
ಒಟ್ಟು ಆಟಗಾರರು: 22 (8 ವಿದೇಶಿ), ರಿಟೇನ್-ಹರಾಜಿನ ಒಟ್ಟು ವೆಚ್ಚ: 119.25 ಕೋಟಿ.
ಬ್ಯಾಟರ್ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ.
ವಿಕೆಟ್ ಕೀಪರ್ಸ್: ಫಿಲ್ ಸಾಲ್ಟ್ ಮತ್ತು ಜಿತೇಶ್ ಶರ್ಮ
ಆಲ್ರೌಂಡರ್ಸ್ : ಲಿಯಾಮ್ ಲಿವಿಂಗ್ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ ಹಾಗೂ ಜಾಕೋಬ್ ಬೆಥೆಲ್.
ಫಾಸ್ಟ್ ಬೌಲರ್ಸ್: ಜೋಶ್ ಹ್ಯಾಸಲ್ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಎನ್ಗಿಡಿ ಹಾಗೂ ಅಭಿನಂದನ್ ಸಿಂಗ್.
ಸ್ಪಿನ್ನರ್ಗಳು: ಸುಯಶ್ ಶರ್ಮಾ ಹಾಗೂ ಮೋಹಿತ್ ರಾಥಿ.
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್ಸ್ಟೋನ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಸ್ಲ್ವುಡ್ ಹಾಗೂ ಸುಯಾಶ್ ಶರ್ಮಾ.
ಒಟ್ಟಾರೆ ಆರ್ಸಿಬಿ ತಂಡ ಈ ಬಾರಿ ಹರಾಜಿನಲ್ಲೇ ಭರವಸೆ ಮೂಡಿಸಿದ್ದು, ಈ ಸಲ ಕಪ್ ನಮ್ಮದೇ ಎಂದು ಜೋರಾಗಿ ಹೇಳುವಂತೆ ಮಾಡಿದೆ. ಏಕೆಂದರೆ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಈ ಬಾರಿ ಆರ್ಸಿಬಿ ತಂಡ ಸಮತೋಲನ ಕಾಯ್ದುಕೊಂಡಿದೆ. ಕಳೆದ 17 ಸೀಸನ್ಗಳಿಂದ ಕೇಳಿಬರುತ್ತಿದ್ದ ಈ ಸಲ ಕಮ್ ನಮ್ಮದೇ ಎಂಬ ಮಾತು ಈ ಬಾರಿಯಾದರೂ ನಿಲ್ಲುತ್ತಾ ಕಾಯಬೇಕಿದೆ. (ಏಜೆನ್ಸೀಸ್)