

ಬೆಂಗಳೂರು: ಸಿಎಸ್ಕೆ ವಿರುದ್ಧದ ಕೊನೇ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದ್ದರೆ ಆರ್ಸಿಬಿ ಹೊರಬೀಳುತಿತ್ತು. ಇದೀಗ ರಾಜಸ್ಥಾನ ವಿರುದ್ಧ ಬುಧವಾರ ಅಹಮದಾಬಾದ್ನಲ್ಲಿ ನಡೆಯಲಿರುವ ಎಲಿಮಿನೇಟರ್ ಕೂಡ ಮಳೆಯಿಂದ ರದ್ದಾದರೆ ಆರ್ಸಿಬಿ ಹೊರಬೀಳಲಿದೆ.
ಕನಿಷ್ಠ 5 ಓವರ್ಗಳ ಪಂದ್ಯ ಅಥವಾ ಸೂಪರ್ ಓವರ್ ಕೂಡ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದ ತಂಡ ಮುನ್ನಡೆಯಲಿದೆ. ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದ ಆರ್ಸಿಬಿ ಹೊರಬಿದ್ದರೆ, 3ನೇ ಸ್ಥಾನಿ ರಾಜಸ್ಥಾನ ಮುನ್ನಡೆಯಲಿದೆ.
ಆರ್ಸಿಬಿಗೆ ಅಸಲಿ ನಾಕೌಟ್
ಆರಂಭಿಕ 8 ಪಂದ್ಯಗಳಲ್ಲಿ 1ರಲ್ಲಿ ಮಾತ್ರ 7ರಲ್ಲಿ ಸೋತಿದ್ದ ಆರ್ಸಿಬಿಗೆ ನಂತರ ಉಳಿದ 6 ಲೀಗ್ ಪಂದ್ಯವೂ ಮಾಡು ಇಲ್ಲವೆ ಮಡಿ ಸವಾಲು ಆಗಿತ್ತು. ಈ 6 ಸವಾಲು ಗೆದ್ದ ಬಳಿಕ ಆರ್ಸಿಬಿಗೆ ಈಗ ಅಸಲಿ ನಾಕೌಟ್ ಪರೀಕ್ಷೆ ಎದುರಾಗಿದೆ. ಟೂರ್ನಿಯ ಮುಂದಿನ 3 ಪಂದ್ಯಗಳಲ್ಲೂ (ಎಲಿಮಿನೇಟರ್, ಕ್ವಾಲಿಫೈಯರ್-2, ಫೈನಲ್) ಆರ್ಸಿಬಿ ಅದೇ ಜೋಶ್ನಲ್ಲಿ ಆಡಿ ಗೆದ್ದರೆ ಪ್ರಶಸ್ತಿಗೆ ಮುತ್ತಿಕ್ಕಲಿದೆ. ಈ ಮೂರು ಪಂದ್ಯಗಳು ಆರ್ಸಿಬಿ ಪಾಲಿಗೆ ಕ್ವಾರ್ಟರ್ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಮಾದರಿಯಲ್ಲಿವೆ.