ಕೆಕೆಆರ್ ಸ್ಪಿನ್ ದಾಳಿಗೆ ತತ್ತರಿಸಿದ ಆರ್​ಸಿಬಿ; 89 ರನ್ ಅಂತರದಿಂದ ಸೋಲು

KKRvsRCB
Published on

ಕೊಲ್ಕತಾ: ಐಪಿಎಲ್ 2023ರ 9ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತಾ ನೈಟ್ ರೈಡರ್ಸ್ ತಂಡ ಆರ್​ಸಿಬಿಗೆ ಗೆಲ್ಲಲು 205 ರನ್​ಗಳ ಬೃಹತ್ ಗುರಿಯನ್ನು ನೀಡಿತ್ತು. ದೊಡ್ಡ ಮೊತ್ತದ ಗುರಿ ಬೆನ್ನು ಹತ್ತಿದ ಆರ್​ಸಿಬಿ, ಕೆಕೆಆರ್​ ತಂಡದ ಸ್ಪಿನ್ ದಾಳಿಗೆ ನಲುಗಿ 89 ರನ್​ಗಳ ಸೋಲು ಕಂಡಿದೆ.

ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಕೆಕೆಆರ್ ತಂಡ ನಿಗದಿತ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಪೇರಿಸಿತ್ತು. ರಹಮಾನುಲ್ಲಾ ಗುರ್ಬಾಜ್ 57, ರಿಂಕು ಸಿಂಗ್ 46, ಶಾರ್ದೂಲ್ ಠಾಕೂರ್ 68 ರನ್ ನೆರವಿನಿಂದ ಕೆಕೆಆರ್ ದೊಡ್ಡ ಮೊತ್ತದ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಆರ್​ಸಿಬಿ ಪರ ಬೌಲಿಂಗ್​ನಲ್ಲಿ ಡೇವಿಡ್ ವಿಲ್ಲಿ ಮತ್ತು ಕರಣ್ ಶರ್ಮಾ ತಲಾ 2 ವಿಕೆಟ್ ಪಡೆದುಕೊಂಡರು. ಮೊಹಮ್ಮದ್ ಸಿರಾಜ್, ಬ್ರಾರ್ಸ್ವೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net