WPL 2024 RCBvsDC: ಗ್ಯಾರಂಟಿ ಆಗಲಿದ್ಯಾ 'ಈ ಸಲ ಕಪ್​ ನಮ್ದೇ'? ಮೊಳಗಿತು ಆರ್​ಸಿಬಿ ಫ್ಯಾನ್ಸ್​ ಕಹಳೆ

WhatsApp-Image-2024-03-17-at-6.55.26-PM
Published on

ನವದೆಹಲಿ: ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ಅಂತಿಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಸೆಣಸಾಡಲಿದೆ. ಫೈನಲ್​ ಪ್ರವೇಶಿಸಿರುವ ಸೃತಿ ಮಂದಣ್ಣ ನೇತೃತ್ವದ ಆರ್​ಸಿಬಿಗೆ ಸದ್ಯ ಅಭಿಮಾನಿಗಳ ಕೂಗು ಜೋರಾಗಿದೆ.

WPL 2024ರ ಆವೃತ್ತಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿರುವ ಡಿಸಿ ಮತ್ತು ಆರ್​ಸಿಬಿ ತಂಡಗಳು ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆದಿದ್ದು, ಅಂತಿಮ ಘಟ್ಟದಲ್ಲಿ ಯಾರಿಗೆ ಭರ್ಜರಿ ಗೆಲುವು ಒಲಿಯಲಿದೆ ಎಂಬ ಕುತೂಹಲ ಹೆಚ್ಚಿದೆ. ಮೆಗ್ ಲ್ಯಾನಿಂಗ್ ನೇತೃತ್ವದ ಡಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರೆ, ಸ್ಮೃತಿ ಮಂದಣ್ಣ ಕ್ಯಾಪ್ಟನ್ಸಿಯ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿ ಪಂದ್ಯಾವಳಿಯ ಮೊದಲ ಫೈನಲ್‌ಗೆ ಪ್ರವೇಶಿಸಿತು.

ಈ ಸೀಸನ್​ನಲ್ಲಿ ಸೃತಿ ಕ್ಯಾಪ್ಟನ್ಸಿಯ ಆರ್​ಸಿಬಿ ಟೂರ್ನಿ ಉದ್ದಕ್ಕೂ ಯಶಸ್ವಿ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಲ್ಲಿ ಅಪಾರ ಭರವಸೆಯನ್ನು ಕೊಟ್ಟಿದೆ. ಮೊದಲ ದಿನದಿಂದಲೂ ಎಲ್ಲೇ ಮೀರಿ ಅಭಿಮಾನ ತೋರಿರುವ ಆರ್​ಸಿಬಿ ಅಭಿಮಾನಿಗಳು, ಫೈನಲ್​ನಲ್ಲಿ ಈ ಸಲ ಕಪ್​ ನಮ್ದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ಮಾರ್ಚ್​ 22ರಂದು ಪ್ರಾರಂಭವಾಗಲಿರುವ ಐಪಿಎಲ್​ನಲ್ಲಿ ಪುರಷರ ಆರ್​ಸಿಬಿ ತಂಡ ಗೆಲುವು ದಾಖಲಿಸುವ ಮುನ್ನ ಮಹಿಳಾ ಮಣಿಯರು ಟ್ರೋಫಿ ಎತ್ತಲಿ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಅಭಿಮಾನಿಗಳ ನಿರೀಕ್ಷೆಯಂತೆ ಆರ್​ಸಿಬಿ ಗೆದ್ದರೇ ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಹೊಸ ದಾಖಲೆ ಬರೆಯುವುದರ ಜತೆಗೆ ಅಪಾರ ಬೆಂಗಳೂರು ತಂಡದ ಅಭಿಮಾನಿಗಳ ಬಹುವರ್ಷಗಳ ಆಸೆಯನ್ನು ಈಡೇರಿಸಿದಂತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net