ಆರ್​ಸಿಬಿ-ಡೆಲ್ಲಿ ಹಣಾಹಣಿ; ಹೀಗಿದೆ ಉಭಯ ತಂಡಗಳ ಪ್ಲೇಆಫ್​​ ಲೆಕ್ಕಾಚಾರ…

web rcb vs dc play off
Published on

ಬೆಂಗಳೂರು: ಆರ್​ಸಿಬಿ -ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್​-17ರಲ್ಲಿ ಬುಧವಾರ ಮುಖಾಮುಖಿ ಆಗುತ್ತಿವೆ. ಡೆಲ್ಲಿ ತಂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ತಲಾ 6 ಜಯ, 6 ಸೋಲಿನೊಂದಿಗೆ 12 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಆರ್​ಸಿಬಿ ತಂಡ ಇಷ್ಟೇ ಪಂದ್ಯಗಳಲ್ಲಿ 5 ಜಯ ಮತ್ತು 7 ಸೋಲಿನೊಂದಿಗೆ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳ ಪ್ಲೇಆಫ್​ ಆಸೆ ಸದ್ಯ ತೂಗುಯ್ಯಾಲೆಯಲ್ಲಿದ್ದು, ಈ ಪಂದ್ಯದ ಫಲಿತಾಂಶ ಉಭಯ ತಂಡಗಳ ಭವಿಷ್ಯ ನಿರ್ಧರಿಸಿದೆ. ಉಭಯ ತಂಡಗಳ ಸದ್ಯದ ಪ್ಲೇಆಫ್​ ಲೆಕ್ಕಾಚಾರ ಹೀಗಿದೆ...

ಆರ್​ಸಿಬಿ: ಕೊನೇ 2 ಪಂದ್ಯಗಳಲ್ಲಿ ಗೆಲ್ಲುವ ಜತೆಗೆ ರನ್​ರೇಟ್​ ಸುಧಾರಣೆ ಮತ್ತು ಇತರ ಫಲಿತಾಂಶಗಳು ಪೂರಕವಾಗಿ ಬರುವುದು ಕೂಡ ಅಗತ್ಯವಾಗಿದೆ. ಅಂದರೆ ಸಿಎಸ್​ಕೆ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ ಗೆಲ್ಲಬೇಕು ಮತ್ತು ಲಖನೌ ತಂಡ ತನ್ನ ಉಳಿದ 2ರಲ್ಲಿ 1 ಪಂದ್ಯವಾದರೂ ಸೋಲಬೇಕು ಮತ್ತು ಗುಜರಾತ್​ ಉಳಿದೆರಡು ಪಂದ್ಯ ಗೆದ್ದರೂ ರನ್​ರೇಟ್​ ಸುಧಾರಿಸಬಾರದು. ಆರ್​ಸಿಬಿಗೆ ಹಾಲಿ ಚಾಂಪಿಯನ್​ ಸಿಎಸ್​ಕೆ (ಮೇ 18) ಕೊನೇ ಲೀಗ್​ ಎದುರಾಳಿಯಾಗಿದೆ.

ಡೆಲ್ಲಿ: ಉಳಿದ 2 ಪಂದ್ಯ ಜಯಿಸುವ ಜತೆಗೆ ರನ್​ರೇಟ್​ ಸುಧಾರಣೆ ಮತ್ತು ಇತರ ಫಲಿತಾಂಶಗಳು ವರವಾಗಬೇಕು. ಅಂದರೆ ಸಿಎಸ್​ಕೆ ಮತ್ತು ಲಖನೌ ಉಳಿದ 2ರಲ್ಲಿ ಒಂದಾದರೂ ಪಂದ್ಯ ಸೋಲಲಿ ಅಥವಾ ಸನ್​ರೈಸರ್ಸ್​ ಉಳಿದ 2 ಪಂದ್ಯಗಳಲ್ಲೂ ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ಡೆಲ್ಲಿಗೆ ಲಖನೌ (ಮೇ 14) ಕೊನೇ ಲೀಗ್​ ಎದುರಾಳಿಯಾಗಿದೆ. ಡೆಲ್ಲಿ ತಂಡ ಕೊನೇ 2ರಲ್ಲಿ 1 ಪಂದ್ಯ ಮಾತ್ರ ಗೆದ್ದರೂ ಗಣಿತಶಾಸ್ತ್ರದ ಪ್ರಕಾರ ಆಸೆ ಜೀವಂತವಿದ್ದರೂ, ರನ್​ರೇಟ್​ ಕಳಪೆಯಾಗಿರುವುದರಿಂದ ಪ್ಲೇಆಫ್​ಗೇರುವುದು ಕಷ್ಟಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net