

ಲಂಡನ್: ಇಂಗ್ಲೆಂಡ್ನ ದಿಗ್ಗಜ ವೇಗಿ ಜೇಮ್ಸ್ ಆಂಡರ್ಸನ್ 21 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಹೇಳಲು ಸಿದ್ಧರಾಗಿದ್ದಾರೆ. ಮುಂಬರುವ ತವರಿನ ಬೇಸಿಗೆ ಋತುವಿನಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಇಂಗ್ಲೆಂಡ್ ಪರ ತನ್ನ ಕೊನೇ ಟೆಸ್ಟ್ ಪಂದ್ಯವನ್ನಾಡುವುದಾಗಿ 41 ವರ್ಷದ ಆಂಡರ್ಸನ್ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ೋಷಿಸಿದ್ದಾರೆ.
ಆತಿಥೇಯ ಇಂಗ್ಲೆಂಡ್ ತಂಡ ಜುಲೈನಲ್ಲಿ ವೆಸ್ಟ್ ಇಂಡೀಸ್ ಎದುರು 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಜು.10 ರಂದು ಲಾರ್ಡ್ಸ್ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. 2003ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಆಂಡರ್ಸನ್, ಇದುವರೆಗೆ 187 ಟೆಸ್ಟ್ಗಳಲ್ಲಿ 700 ವಿಕೆಟ್ ಕಬಳಿಸಿದ್ದಾರೆ. ಮುತ್ತಯ್ಯ ಮುರುಳಿಧರನ್, ಶೇನ್ ವಾರ್ನ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದಿರುವ 3ನೇ ಬೌಲರ್ ಎನಿಸಿದ್ದಾರೆ. ೆಬ್ರವರಿಯಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಆಂಡರ್ಸನ್ ಈ ಸಾಧನೆ ಮಾಡಿದ್ದರು. ಗರಿಷ್ಠ ಟೆಸ್ಟ್ ಆಡಿದವರ ಸಾಲಿನಲ್ಲಿಯೂ ದಿಗ್ಗಜ ಸಚಿನ್ ತೆಂಡುಲ್ಕರ್ (200) ನಂತರದ ಆಟಗಾರ ಎಂಬ ದಾಖಲೆಯೂ ಆಂಡರಸನ್ ಅವರದಾಗಿದೆ. 2025-26 ಋತುವಿನ ಆಶಸ್ ಸರಣಿಗೆ ಬೌಲಿಂಗ್ ವಿಭಾಗವನ್ನು ಸಜ್ಜುಗೊಳಿಸಲು ಭವಿಷ್ಯದತ್ತ ಗಮನಹರಿಸಿರುವುದರಿಂದ, ನಿವೃತ್ತಿ ಹೇಳುವಂತೆ ಆಂಡರ್ಸನ್ಗೆ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಆಂಡರ್ಸನ್ 194 ಏಕದಿನ ಪಂದ್ಯದಲ್ಲಿ 269 ವಿಕೆಟ್, 19 ಟಿ20ಯಲ್ಲಿ 18 ವಿಕೆಟ್ ಕಬಳಿಸಿದ್ದಾರೆ. 2009ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ.