

RCB vs SRH: ನಿನ್ನೆ (ಮೇ.24) ಲಖನೌದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಎಸ್ಆರ್ಎಚ್ 42 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಆರ್ಸಿಬಿಗೆ ದೊಡ್ಡ ಶಾಕ್ ನೀಡಿತು.
ಎಸ್ಆರ್ಎಚ್ ನೀಡಿದ್ದ 232 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಆರ್ಸಿಬಿಗೆ ಉತ್ತಮ ಬ್ಯಾಟಿಂಗ್ ಸಿಗಲಿಲ್ಲ. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದೇ ಆದರೂ ಹೆಚ್ಚಿನ ಕಾಲ ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಇನ್ನೂ ಕೊಹ್ಲಿ, ಸಾಲ್ಟ್ ವಿಕೆಟ್ ನಂತರ ಬಂದವರು ಕೂಡ ಹೆಚ್ಚಿನ ಕಾಲ ಕ್ರೀಸ್ನಲ್ಲಿ ನಿಂತು ತಂಡದ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡಲಿಲ್ಲ. ಪಂದ್ಯ ಸೋತ ಬಳಿಕ ಮಾತನಾಡಿದ ಕ್ಯಾಪ್ಟನ್ ಜಿತೇಶ್ ಶರ್ಮ, ಮಾತನಾಡುವ ಭರದಲ್ಲಿ ದೊಡ್ಡ ಎಡವಟ್ಟಿಗೆ ಸಿಲುಕುತ್ತಿದ್ದರು. ಈ ಸೂಕ್ಷ್ಮತೆಯನ್ನು ಅರಿತ ರವಿಶಾಸ್ತ್ರಿ, ಮಾತನಾಡುವ ವೇಳೆಯೇ ಅವರ ಹೇಳಿಕೆಯನ್ನು ಸರಿಪಡಿಸಿದ್ದಾರೆ.
"ನಾವು 20ರಿಂದ 30 ರನ್ ಹೆಚ್ಚು ಕೊಟ್ಟೆವು. ಅವರು ಪವರ್ಪ್ಲೇನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಎಸ್ಆರ್ಎಚ್ ಪರಿಣಾಮಕಾರಿ ಬ್ಯಾಟಿಂಗ್ ಬಗ್ಗೆ ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ. ಮೊದಲ 6 ಓವರ್ ನಮಗೆ ಕಷ್ಟವಾಯಿತು. ನಮ್ಮ ಬೌಲರ್ಗಳು ಉತ್ತಮ ಕಮಾಲ್ ಮಾಡಿದರು. ಮಧ್ಯಮ ಹಾಗೂ ಡೆತ್ ಓವರ್ನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದರು. ಈ ಪಂದ್ಯ ಸೋತಿದ್ದು ಒಳ್ಳೆದೇ ಆಯಿತು" ಎಂದು ಕೊನೆಯಲ್ಲಿ ಹೇಳಿದರು. ಜಿತೇಶ್ ಶರ್ಮ ಹೀಗೇಳುತ್ತಿದ್ದಂತೆ ಅವರ ಮಾತನ್ನು ತಿದ್ದಿದ ರವಿಶಾಸ್ತ್ರಿ, "ಹೌದು. ಪ್ಲೇಆಫ್ಗೆ ಆಡುವ ಮೊದಲು ಒಂದು ಪಂದ್ಯ ಸೋತರೆ, ಮುಂದಿನ ಪಂದ್ಯಗಳಿಗೆ ಒಂದಷ್ಟು ಬದಲಾವಣೆ ಮತ್ತು ಸರಿಪಡಿಸಿಕೊಳ್ಳುವ ಅವಕಾಶ ಸಿಗಲಿದೆ" ಎಂದು ಹೇಳಿದರು.
ಜಿತೇಶ್ ಶರ್ಮ ಹೇಳಿಕೆಯನ್ನು ಕೂಡಲೇ ಸರಿಪಡಿಸಿ, ಅದನ್ನು ಈ ರೀತಿ ಹೇಳಿದರೂ ಎಂಬಂತೆ ರವಿಶಾಸ್ತ್ರಿ ಬಿಂಬಿಸಿದರು. ತಾನು ಹೇಳಿದ್ದರ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ ಜಿತೇಶ್, ರವಿಶಾಸ್ತ್ರಿ ಅವರ ಹೇಳಿಕೆಗೆ ಸರಿದೂಗಿಸಿಕೊಂಡು ಹೋಗಿದ್ದು ದೃಶ್ಯಗಳಲ್ಲಿ ಸೆರೆಯಾಗಿದೆ. ಜಿತೇಶ್ರ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).