'ಪುಷ್ಪ' ಚಿತ್ರದ ಹಾಡುಗಳು ಮತ್ತು ಡೈಲಾಗ್ಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಹೆಚ್ಚು ಆಗುತ್ತಿದೆ. ನಟ ಅಲ್ಲು ಅರ್ಜುನ್ ಅಭಿಮಾನಿಗಳು, ಸಿನಿ ಲವರ್ಸ್, ಪ್ರೇಕ್ಷಕರು, ಸಾಮಾನ್ಯರು ಎಂಬಂತೆ ಎಲ್ಲರೂ 'ಪುಷ್ಪ' ಚಿತ್ರದ ಹಾಡುಗಳು ಡ್ಯಾನ್ಸ್ ಮತ್ತು ಡೈಲಾಗ್ಗಳನ್ನು ಅನುಕರಿಸುತ್ತಿದ್ದಾರೆ. ಇದೀಗ, ಈ ಸಾಲಿಗೆ ಸೇರುತ್ತಿರುವುದು ನಮ್ಮ ದೇಶದ ಕ್ರಿಕೆಟಿಗರು. ಹೌದು, 'ಪುಷ್ಪ' ಸಿನಿಮಾದಿಂದ ಅಲ್ಲು ಅರ್ಜುನ್ ಅವರ ಡೈಲಾಗ್ಗಳು ಮತ್ತು ಲುಕ್ಗಳನ್ನು ಅನುಕರಿಸುವ ಮಾಸ್ ಟ್ರೆಂಡ್ಗೆ ಹೊಸದಾಗಿ ಸೇರಿಕೊಂಡವರು ರವೀಂದ್ರ ಜಡೇಜಾ ಮತ್ತು ಶಿಖರ್ ಧವನ್! ನಟ ಅಲ್ಲು ಅರ್ಜುನ್ ಮೇಲಿನ ಅಭಿಮಾನಿಗಳ ಹುಚ್ಚು ಮತ್ತು ಮಾಸ್ ಫ್ಯಾಂಡಮ್ ಸದ್ಯ ಈ ಚಿತ್ರದಿಂದ ಎಲ್ಲಾ ಗಡಿಗಳು ಮತ್ತು ಭಾಷೆಯ ಅಡೆತಡೆಗಳನ್ನು ದಾಟಿ ಜತೆಗೆ ಮೀರಿದೆ. 'ಪುಷ್ಪಾ' ದೇಶಾದ್ಯಂತ ಅಲ್ಲು ಅರ್ಜುನ್ ಅವರ ಸೂಪರ್‌ಸ್ಟಾರ್‌ಡಮ್‌ಗೆ ಮಿತಿಯಿಲ್ಲದಂತೆ ಮಾಡಿದೆ.