ಇನ್ನು 4-5 ವರ್ಷಗಳ ಕಾಲ ಆತ ಆಡಬಹುದು: ಟೀಮ್ ಇಂಡಿಯಾದ ಸ್ಟಾರ್ ಆಟಗಾರನ ಬಗ್ಗೆ ರವಿಶಾಸ್ತ್ರಿ ಬಿಚ್ಚುಮಾತು | Ravi Shastri

ವಿಜಯವಾಣಿ (20)
Published on

Ravi Shastri: ಪ್ರಸ್ತುತ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದ ಐದನೇ ದಿನದಂದು ಗುರಿಯನ್ನು ತಲುಪಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ಸ್ಟಾರ್ ಆಟಗಾರರ ವಿಕೆಟ್ ಶೀಘ್ರ ಪತನವಾಗಿರುವುದು ಸದ್ಯ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ನಾಲ್ಕನೇ ಟೆಸ್ಟ್ ಕೂಡ ಡ್ರಾನಲ್ಲಿ ಅಂತ್ಯ ಕಾಣುವ ಲಕ್ಷಣಗಳು ಸದ್ಯ ಹೆಚ್ಚಿದ್ದು, ಟೀಮ್ ಇಂಡಿಯಾಗೆ ಗೆಲುವಿನ ಅನಿವಾರ್ಯ ಎಂಬುದು ಗಮನಾರ್ಹ.

ಕೊಹ್ಲಿ ನಿವೃತ್ತಿ ಭವಿಷ್ಯ

ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಪಂದ್ಯದಲ್ಲಿ ಒಂದು ಶತಕ ಹೊರತುಪಡಿಸಿದರೆ ಉಳಿದೆಲ್ಲಾ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​, ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಐದನೇ ದಿನದ ಇನ್ನಿಂಗ್ಸ್​ನಲ್ಲಿಯೂ ಸಹ ಇದೇ ರೀತಿಯ ಕಳಪೆ ಆಟವನ್ನು ತೋರಿದ ವಿರಾಟ್​, ವೈಡ್​ ಹೋಗುತ್ತಿದ್ದ ಬಾಲ್​ಗೆ ಆಡಲು ಪ್ರಯತ್ನಿಸಿ, ಕೇವಲ ಐದು ರನ್​ಗೆ ಬೌಲರ್​ ಉಸ್ಮಾನ್​ ಖವಾಜಗೆ ವಿಕೆಟ್ ಒಪ್ಪಿಸಿದರು. ಬೇಸರದ ಮುಖದಲ್ಲಿ ಪೆವಿಲಿಯನ್​ನತ್ತ ಸಾಗಿದ ಕೊಹ್ಲಿ ನೋಡುತ ಕಮೆಂಟೇಟರಿ ಬಾಕ್ಸ್​ನಲ್ಲಿ ಮಾತನಾಡಿದ ಮಾರ್ಕ್​ ನಿಕೋಲಸ್​, ರವಿಶಾಸ್ತ್ರಿ ಅವರೇ, ರೋಹಿತ್ ಶರ್ಮ ಮತ್ತಿ ಕೊಹ್ಲಿ ಭವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು.

ರೋಹಿತ್ ಶರ್ಮ ನಿರ್ಧಾರ

ಇದಕ್ಕೆ ಉತ್ತರಿಸಿದ ರವಿಶಾಸ್ತ್ರಿ, "ನನಗೆ ಅನಿಸೋದು ವಿರಾಟ್​ ಇಷ್ಟು ಬೇಗ ನಿವೃತ್ತಿ ಹೊಂದುವುದಿಲ್ಲ. ನನ್ನ ಪ್ರಕಾರ, ಇನ್ನು ನಾಲ್ಕರಿಂದ ಐದು ವರ್ಷಗಳ ಕಾಲ ಅವರು ಕ್ರಿಕೆಟ್ ಆಡುತ್ತಾರೆ ಎಂಬ ಭರವಸೆ ನನಗಿದೆ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟಿಂಗ್​ ಬಾಕಿ ಉಳಿದಿದೆ. ಹಾಗಾಗಿ ಅಷ್ಟು ಬೇಗ ನಿವೃತ್ತಿ ಘೋಷಿಸುವ ಮಾತಿಲ್ಲ. ಆದರೆ, ರೋಹಿತ್ ಶರ್ಮಗೆ ಇದರ ಸುಳಿವು ಸಿಕ್ಕಂತೆ ಭಾಸವಾಗುತ್ತಿದೆ. ತಮ್ಮ ಬಳಿ ಬರುವ ಬಾಲ್​ನ ಬಹಳ ಮಂದಗತಿಯಲ್ಲಿ ಆಡ್ತಿದ್ದಾರೆ. ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅಂತಿಮವಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಕ್ತಾಯಗೊಂಡ ನಂತರ ನಿರ್ಧಾರ ತೆಗೆದುಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿರುವುದು" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net