

ಜೈಪುರ: ಗೆಲುವಿನ ಸಿಕ್ಸರ್ ಸಿಡಿಸಿ ಬೀಗುತ್ತಿರುವ ಗುಜರಾತ್ ಟೈಟಾನ್ಸ್ ಮತ್ತು ಸತತ 5 ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಸೋಮವಾರ ಮುಖಾಮುಖಿ ಆಗಲಿವೆ. ತವರಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಸೋಲಿನ ಸರಪಳಿ ಮುರಿಯುವ ಹಂಬಲ ರಾಜಸ್ಥಾನ ತಂಡದ್ದಾಗಿದೆ. ಆದರೆ ಭರ್ಜರಿ ಲಯದಲ್ಲಿರುವ ಗುಜರಾತ್ ಎದುರು ಕಠಿಣ ಸತ್ವಪರೀೆ ಎದುರಾಗುವ ನಿರೀಕ್ಷೆ ಇದೆ.
ಶುಭಮಾನ್ ಗಿಲ್ ಪಡೆ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋತಿದ್ದು, ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆ್ಗೆ ಸನಿಹವಾಗಲಿದೆ. ಮತ್ತೊಂದೆಡೆ ರಾಜಸ್ಥಾನ ತಂಡ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 7 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ರಾಜಸ್ಥಾನ ಈ ಪಂದ್ಯವನ್ನು ಸೋತರೆ ಪ್ಲೇಆ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಟೈಟಾನ್ಸ್ಗೆ ಆಲ್ರೌಂಡ್ ಶಕ್ತಿ
ಆರೆಂಜ್ ಕ್ಯಾಪ್ ರೇಸ್ನಲ್ಲಿರುವ ಸಾಯಿ ಸುದರ್ಶನ್ (417 ರನ್) ಮತ್ತು ಪರ್ಪಲ್ ಕ್ಯಾಪ್ ರೇಸ್ನಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ (16 ವಿಕೆಟ್) ಗುಜರಾತ್ಗೆ ಸರ್ವಾಂಗೀಣ ಶಕ್ತಿ ತುಂಬಿದ್ದಾರೆ. ಇವರಿಗೆ ಜೋಸ್ ಬಟ್ಲರ್ (356), ಶುಭಮಾನ್ ಗಿಲ್ (305) ಮತ್ತು ಬೌಲಿಂಗ್ನಲ್ಲಿ ಸಾಯಿ ಕಿಶೋರ್ (12) ಮತ್ತು ಮೊಹಮದ್ ಸಿರಾಜ್ (12) ಸಮರ್ಥ ಬೆಂಬಲ ಒದಗಿಸಿದ್ದಾರೆ. ದಣ ಆಫ್ರಿಕಾದ ವೇಗಿ ಕಗಿಸೊ ರಬಾಡ ವೈಯಕ್ತಿಕ ಕಾರಣದಿಂದಾಗಿ ಟೂರ್ನಿಯ ನಡುವೆ ತವರಿಗೆ ಮರಳಿದ್ದರೂ ಟೈಟಾನ್ಸ್ಗೆ ಹೆಚ್ಚಿನ ಹಿನ್ನಡೆ ಎದುರಾಗಿಲ್ಲ. ಗಾಯದಿಂದ ಗುಣಮುಖರಾಗಿ ಮರಳಿದ ಬಳಿಕ ಪ್ರಸಿದ್ಧ ಕೃಷ್ಣ ಟಿ20 ಕ್ರಿಕೆಟ್ ಪ್ರಕಾರದಲ್ಲಿ ಭಿನ್ನ ಬೌಲರ್ ಆಗಿ ವಿಕೆಟ್ ಬೇಟೆಯಾಡುತ್ತಿದ್ದಾರೆ. ಅನುಭವಿ ಸ್ಪಿನ್ನರ್ ರಶೀದ್ ಖಾನ್ ಇನ್ನಷ್ಟು ಪರಿಣಾಮಕಾರಿ ಎನಿಸಿದರೆ ಟೈಟಾನ್ಸ್ಗೆ ಇನ್ನಷ್ಟು ಬಲ ಸಿಗಲಿದೆ.
ಗೆಲುವಿನ ಬರ ನೀಗಿಸುವುದೇ ಆರ್ಆರ್?
ರಾಜಸ್ಥಾನ ತಂಡ ಟೂರ್ನಿಯಲ್ಲಿ ಗೆಲುವು ಸಾಧಿಸಿ 25 ದಿನಗಳೇ ಕಳೆದುಹೋಗಿವೆ. ಏಪ್ರಿಲ್ 5ರಂದು ಪಂಜಾಬ್ ಎದುರು ಕೊನೆಯದಾಗಿ ರಾಜಸ್ಥಾನ ಗೆದ್ದಿತ್ತು. ನಂತರದಲ್ಲಿ ಗುಜರಾತ್, ಡೆಲ್ಲಿ, ಲಖನೌ, ಆರ್ಸಿಬಿ (2 ಬಾರಿ) ಎದುರು ಪರಾಭವಗೊಂಡಿದೆ. ಗುಜರಾತ್ ವಿರುದ್ಧ ಅಹಮದಾಬಾದ್ನಲ್ಲಿ ನಡೆದ ಕಳೆದ ಮುಖಾಮುಖಿಯಲ್ಲಿ 58 ರನ್ಗಳಿಂದ ಹೀನಾಯವಾಗಿ ಸೋತಿದ್ದ ರಾಜಸ್ಥಾನ ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶವನ್ನೂ ಹೊಂದಿದೆ. ಗೆಲ್ಲಬಹುದಾಗಿದ್ದ ಕಳೆದ 3 ಪಂದ್ಯಗಳನ್ನು ಸೂಪರ್ ಓವರ್ನಲ್ಲಿ, 2 ಮತ್ತು 11 ರನ್ಗಳಿಂದ ಸೋತಿರುವ ರಾಜಸ್ಥಾನ ಈಗ ಟೂರ್ನಿ "ಚೋಕರ್ಸ್' ಎನಿಸಿದೆ. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ನಿತೀಶ್ ರಾಣಾ, ಧ್ರುವ ಜುರೆಲ್ ಉತ್ತಮ ಲಯದಲ್ಲಿದ್ದಾರೆ. ಆದರೆ ಫಿನಿಶರ್ ಕೊರತೆ ಕಾಡುತ್ತಿದೆ. ಬೌಲಿಂಗ್ ವಿಭಾಗದ ಅಸ್ಥಿರ ನಿರ್ವಹಣೆಯೂ ಹಿನ್ನಡೆ ತಂದಿದೆ.
*ಮುಖಾಮುಖಿ: 7
ರಾಜಸ್ಥಾನ: 1
ಗುಜರಾತ್: 6
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
*37: ಯಶಸ್ವಿ ಜೈಸ್ವಾಲ್ ಇನ್ನು 37 ರನ್ ಗಳಿಸಿದರೆ ಐಪಿಎಲ್ನಲ್ಲಿ 2 ಸಾವಿರ ರನ್ ಪೂರೈಸಲಿದ್ದಾರೆ.
*3: ಪ್ರಸಿದ್ಧ ಕೃಷ್ಣ ಇನ್ನು 3 ವಿಕೆಟ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ಪೂರೈಸಲಿದ್ದಾರೆ.