'ಇಬ್ಬರು ಸ್ಟಾರ್​ ಕ್ಯಾಪ್ಟನ್​ಗಳ ಮನಗೆದ್ದ ಶಿವಂ'! ಟಿ-20 ಸ್ಪೆಷಲಿಸ್ಟ್​ ಸುರೇಶ್ ರೈನಾ ಹೇಳಿದ ನಾಯಕರು ಯಾರು?

ವಿಜಯವಾಣಿ - 2024-01-16T075925.756
Published on

ಹೊಸದಿಲ್ಲಿ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಲ್ಲಿನ ಪ್ರಭಾವಿ ಪ್ರದರ್ಶನದ ನಂತರ ಶಿವಂ ದುಬೆಗೆ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಹೆಚ್ಚಿನ ಅವಕಾಶವಿದೆ ಎಂದು ಭಾರತೀಯ ಕ್ರಿಕೆಟ್​ ತಂಡದ ಮಾಜಿ ಆಟಗಾರ, ಎಡಗೈ ಬ್ಯಾಟ್ಸ್​ಮನ್​ ಸುರೇಶ್ ರೈನಾ ಅಭಿಪ್ರಾಯಿಸಿದ್ದಾರೆ. ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ದುಬೆ, ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ನಾ ಮುಂದಿದ್ದೇನೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇಂಜುರಿಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಬದಲಿಗೆ ದುಬೆ ಆಡಲು ಅಖಾಡಕ್ಕೆ ಇಳಿದಿದ್ದು, ಮಧ್ಯಮ ಓವರ್‌ಗಳಲ್ಲಿ ತಮ್ಮ ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ್ದಾರೆ. ಈ ಮೂಲಕ ಎರಡು ಪಂದ್ಯಗಳಲ್ಲಿ ಭಾರತವು ಪ್ರಬಲ ಗೆಲುವುಗಳನ್ನು ದಾಖಲಿಸಲು ದುಬೆ ಸಹಾಯ ಮಾಡಿದರು. ಶಿವಂ ಅವರನ್ನು ರೋಹಿತ್ ಚೆನ್ನಾಗಿ ಬಳಸಿಕೊಂಡಿದ್ದಾರೆ ಮತ್ತು ಉತ್ತಮ ವಿಶ್ವಾಸ ತುಂಬಿದ್ದಾರೆ ಎಂದು ಸುರೇಶ್​ ರೈನಾ ಹೊಗಳಿದರು.

“ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಶಿವಂ ಕೂಡ ಬ್ಯಾಟಿಂಗ್ ಮಾಡಬಹುದು. ರೋಹಿತ್ ಶರ್ಮಾ ಅವರನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಐಪಿಎಲ್ ಫಾರ್ಮ್ ಸಹ ಬಹಳ ಮುಖ್ಯವಾಗಿರುತ್ತದೆ" ಎಂದರು.

"ದುಬೆ ಟೀಮ್​ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅವರ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಬ್ಬರನ್ನೂ ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧೋನಿ ಮತ್ತು ರೋಹಿತ್​ ಇಬ್ಬರೂ ಸಹ ಒಂದೇ ರೀತಿ ವಿಶ್ವಾಸ ನೀಡುವುದೇ ಇದಕ್ಕೆ ಬಲವಾದ ಕಾರಣ" ಎಂದು ರೈನಾ ಹೇಳಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net