ಇಂದಿನಿಂದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಶೆಟ್ಟಿ ತವರಿನಲ್ಲಿ ಫೇವರಿಟ್

New-Project-7-1
Published on

ನವದೆಹಲಿ: ಭಾನುವಾರ ಮುಕ್ತಾಯಗೊಂಡ ವರ್ಷದ ಮೊದಲ ಟೂರ್ನಿ ಮಲೇಷ್ಯಾ ಓಪನ್‌ನಲ್ಲಿ ಭಾರತೀಯರ ನೀರಸ ನಿರ್ವಹಣೆ ಬೆನ್ನಲ್ಲೇ ಮಂಗಳವಾರ ಇಂಡಿಯನ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿ ಆರಂಭಗೊಳ್ಳಲಿದೆ. ಕೌಲಾಲಂಪುರದಲ್ಲಿ ಪುರುಷರ ಡಬಲ್ಸ್‌ನಲ್ಲಿ ರನ್ನರ್ ಅಪ್ ಎನಿಸಿದ ಸಾತ್ವಿಕ್-ಚಿರಾಗ್ ಶೆಟ್ಟಿ, ತವರಿನಲ್ಲಿ ೇವರಿಟ್ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಟೂರ್ನಿಗೆ ಅಲಭ್ಯರಾಗಿದ್ದಾರೆ.

2022ರ ಟೂರ್ನಿಯ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್, ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಚಾಂಪಿಯನ್ ಆಗಿದ್ದರು. ಆದರೆ 2023ರಲ್ಲಿ ಭಾರತದ ಯಾವೊಬ್ಬ ಷಟ್ಲರ್ ಸಹ ಕ್ವಾರ್ಟರ್‌ೈನಲ್ ಪ್ರವೇಶಿಸುವಲ್ಲಿ ವಿಲರಾಗಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ರೇಸ್‌ನಲ್ಲಿರುವ ಭಾರತೀಯ ಷಟ್ಲರ್‌ಗಳಿಗೆ ಈ ಟೂರ್ನಿ ಪ್ರಮುಖ ಎನಿಸಿದೆ. ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್, ಕಿಡಂಬಿ ಶ್ರೀಕಾಂತ್, ಲಕ್ಷ್ಯಸೇನ್ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ವಿಶ್ವ ನಂ.8 ಪ್ರಣಯ್ ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಚೌ ಟಿನ್ ಚೆನ್ ಅವರನ್ನು ಎದುರಿಸಿದರೆ, ಲಕ್ಷ್ಯಸೇನ್ ದೇಶ ಬಾಂಧವ ಪ್ರಿಯಾಂಶು ರಾಜಾವತ್ ಸವಾಲು ಎದುರಿಸಲಿದ್ದಾರೆ. ಮಾಜಿ ವಿಶ್ವ ನಂ.1 ಕಿಡಂಬಿ ಶ್ರೀಕಾಂತ್ ಹಾಂಕಾಂಗ್ ನ ಲೀ ಚಿಯುಕು ಯಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತೀಯರ ಕೋಟಾ ಪಡೆಯಲು ಲಕ್ಷ್ಯ ಹಾಗೂ ಶ್ರೀಕಾಂತ್ ಪೈಪೋಟಿ ನಡೆಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ, ಗಾಯತ್ರಿ ಗೋಪಿಚಂದ್-ತ್ರೀಸಾ ಜೋಲಿ ಜೋಡಿ ಕಣಕ್ಕಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net