

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ತಂಡದ ವಿರುದ್ಧ ಇಂದು ನಡೆದ IPL 2025ರ 27ನೇ ಪಂದ್ಯದಲ್ಲಿ ಸನ್ ರೈಸಸ್ ಹೈದರಾಬಾದ್(HYD) 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಇಲೆವನ್ ಕಿಂಗ್ಸ್ ನಿಗದಿತ 20 ಒವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 254 ಬೃಹತ್ ರನ್ ಪೇರಿಸಿತು. ನಾಯಕ ಶ್ರೇಯಸ್ ಆಯ್ಯರ್ 36 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸುವ ಮೂಲಕ 82 ರನ್ ಗಳಿಸಿ ಅಬ್ಬರಿಸಿದರು.
254 ಬೃಹತ್ ರನ್ಗಳ ಗುರಿ ಬೆನ್ನಟ್ಟಿದ SRH ತಂಡ, ಓಪನರ್ಗಳಾದ ಟ್ರಾವಿಸ್ ಹೆಡ್ 66 ರನ್(37 ಎಸೆತ, 9 ಫೋರ್, 3 ಸಿಕ್ಸ್)ಗೆ ಔಟ್ ಆದರು. ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಅಭಿಷೇಕ್ ಶರ್ಮಾ, 40 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು. 54 ಎಸೆತಗಳಲ್ಲಿ 141 ರನ್ಗಳಿಸಿದ ಔಟ್ ಆದ ಶರ್ಮ ಗೇಮ್ ಚೇಂಜರ್ ಆದರು.(ಏಜೆನ್ಸೀಸ್)