

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ (57 ರನ್, 99 ಎಸೆತ, 7 ಬೌಂಡರಿ) 16 ವಯೋಮಿತಿಯ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿ ಗಮನಸೆಳೆದರು.
ಆದರೆ, ವಿಕೆಟ್ ಕೀಪರ್-ಬ್ಯಾಟರ್ ಅನ್ವಯ್ ಹೋರಾಟದ ನಡುವೆಯೂ ಕರ್ನಾಟಕ ತಂಡ, ಆಂಧ್ರದ ಮಂಗಳಗಿರಿಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಿದರ್ಭ ಎದುರು 25 ರನ್ಗಳಿಂದ ಹಿನ್ನಡೆ ಅನುಭವಿಸಿತು.
ವಿದರ್ಭದ 203 ರನ್ಗಳಿಗೆ ಪ್ರತಿಯಾಗಿ ಕರ್ನಾಟಕ 178 ರನ್ಗಳಿಗೆ ಆಲೌಟ್ ಆಯಿತು. ವಿದರ್ಭ ದಿನದಂತ್ಯಕ್ಕೆ 2ನೇ ಇನಿಂಗ್ಸ್ನಲ್ಲಿ 2 ವಿಕೆಟ್ಗೆ 100 ರನ್ ಗಳಿಸಿ ಒಟ್ಟಾರೆ 125 ರನ್ ಮುನ್ನಡೆ ಸಾಧಿಸಿದೆ.