ಆರ್​. ಅಶ್ವಿನ್​ ವಿದಾಯದ ನಂತರ ವಿರಾಟ್​ ಕೊಹ್ಲಿ ಭಾವುಕರಾಗಿದ್ದೇಕೆ? ಇಲ್ಲಿದೆ ಕಾರಣ...

web ash kohli
Published on

ಬ್ರಿಸ್ಬೇನ್: ಗಾಬಾ ಟೆಸ್ಟ್​ ಬಳಿಕ ಅಶ್ವಿನ್​ ನಿವೃತ್ತಿ ಪ್ರಕಟಿಸುವ ಮುನ್ನ ಡ್ರೆಸ್ಸಿಂಗ್​ ರೂಮ್​ನಲ್ಲಿ ವಿರಾಟ್​ ಕೊಹ್ಲಿ ಬಳಿ ಕುಳಿತು ತಮ್ಮ ನಿರ್ಧಾರವನ್ನು ತಿಳಿಸಿದರು. ಈ ವೇಳೆ ಕೊಹ್ಲಿ ಭಾವುಕರಾಗಿ ಅಶ್ವಿನ್​ರನ್ನು ಅಪ್ಪಿಕೊಂಡರು.

"ನಾನು 14 ವರ್ಷಗಳ ನಿಮ್ಮೊಂದಿಗೆ ಆಡಿರುವೆ. ಹೀಗಾಗಿ ನೀವು ನಿವೃತ್ತಿ ನಿರ್ಧಾರ ತಿಳಿಸಿದಾಗ ನಾನು ಸ್ವಲ್ಪ ಭಾವುಕನಾದೆ. ನಾವು ಜತೆಯಾಗಿ ಆಡಿದ ದಿನಗಳ ನೆನಪುಗಳೆಲ್ಲ ಮರುಕಳಿಸಿದವು. ಆಶ್​ ನಿಮ್ಮೊಂದಿಗಿನ ಪ್ರತಿ ಕ್ಷಣವನ್ನೂ ಆನಂದಿಸಿರುವೆ. ನಿಮ್ಮ ಪಂದ್ಯ ಗೆಲ್ಲಿಸುವ ಕೊಡುಗೆ ಮತ್ತು ಕೌಶಲ ಸಾಟಿ ಇಲ್ಲದ್ದು. ನೀವು ಭಾರತೀಯ ಕ್ರಿಕೆಟ್​ನಲ್ಲಿ ಯಾವಾಗಲೂ ದಿಗ್ಗಜರಾಗಿ ಸ್ಮರಿಸಲ್ಪಡುತ್ತೀರಿ. ನಿಮಗೆ ಅಪಾರ ಗೌರವದ ಜತೆಗೆ ಪ್ರೀತಿಯನ್ನು ನೀಡುವೆ. ನಿಮ್ಮ ಕುಟುಂಬದೊಂದಿಗೆ ಕಳೆಯುವ ಭವಿಷ್ಯದ ದಿನಗಳಿಗೆ ಶುಭವಾಗಲಿ' ಎಂದು ಕೊಹ್ಲಿ ನಂತರ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

*ಅಶ್ವಿನ್​ ನಿಮ್ಮ ಜರ್ನಿ ಅಸಾಧಾರಣಕ್ಕಿಂತ ಕಡಿಮೆಯೇನಲ್ಲ. 700ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಕೆಟ್​ ಮತ್ತು ಕ್ರಿಕೆಟಿಂಗ್​ ಮೈಂಡ್​ನೊಂದಿಗೆ ನೀವು ಮೈದಾನದಲ್ಲಿ ಕಾಣಿಸಿಕೊಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದೀರಿ. ಅಮೋಘ ವೃತ್ತೀಜಿವನಕ್ಕಾಗಿ ಅಭಿನಂದನೆಗಳು. ಮೈದಾನದ ಹೊರಗಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ.

| ಅನಿಲ್​ ಕುಂಬ್ಳೆ, ಮಾಜಿ ಸ್ಪಿನ್ನರ್​

*ಪರಿಪೂರ್ಣ ಕ್ಯಾರಂ ಬಾಲ್​ನಿಂದ ಅಮೂಲ್ಯ ರನ್​ ಕೊಡುಗೆಯವರೆಗೆ ಅಶ್ವಿನ್​ ಯಾವಾಗಲೂ ಗೆಲುವಿನ ಹಾದಿಯನ್ನು ಹುಡುಕುವವರು. ಪ್ರತಿಭಾನ್ವಿತ ಆಟಗಾರನಿಂದ ಭಾರತ ಕಂಡ ಅತ್ಯುತ್ತಮ ಮ್ಯಾಚ್​ ವಿನ್ನರ್​ಗಳಲ್ಲಿ ಒಬ್ಬರಾಗಿ ಬೆಳೆದಿರುವುದನ್ನು ನೋಡಿರುವೆ. ನಿಮ್ಮ 2ನೇ ಇನಿಂಗ್ಸ್​ಗೆ ಶುಭವಾಗಲಿ.

| ಸಚಿನ್​ ತೆಂಡುಲ್ಕರ್​, ಕ್ರಿಕೆಟ್​ ದಿಗ್ಗಜ

*ಯುವ ಬೌಲರ್​ನಿಂದ ಆಧುನಿಕ ಕ್ರಿಕೆಟ್​ ದಿಗ್ಗಜರಲ್ಲಿ ಒಬ್ಬರಾಗಿ ಬೆಳೆದಿರುವುದನ್ನು ನೋಡಿರುವುದೇ ಭಾಗ್ಯ. ಅಶ್ವಿನ್​ ಅವರಿಂದಾಗಿ ನಾನು ಬೌಲರ್​ ಆದೆ ಎಂದು ಮುಂದಿನ ತಲೆಮಾರಿನವರು ಖಂಡಿತವಾಗಿಯೂ ಹೇಳಲಿದ್ದಾರೆ. ಸಹೋದರ ನಿಮ್ಮನ್ನು ಮಿಸ್​ ಮಾಡಿಕೊಳ್ಳುವೆ.

| ಗೌತಮ್​ ಗಂಭೀರ್​, ಭಾರತದ ಮುಖ್ಯ ಕೋಚ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net