

ಬೆಂಗಳೂರು: ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ಡಿ. ಗುಕೇಶ್ ಆರಂಭದಿಂದಲೇ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ ಅವರ ಆಕ್ರಮಣಕಾರಿ ಆಟಗಳಿಗೆಲ್ಲ ಚೀನಾದ ಡಿಂಗ್ ಲಿರೆನ್ ದಿಟ್ಟ ತಿರುಗೇಟು ನೀಡುವ 14ನೇ ಹಾಗೂ ಕೊನೇ ಪಂದ್ಯದವರೆಗೂ ಸ್ಪರ್ಧೆಯನ್ನು ಎಳೆದರು. ಕೊನೆಗೂ ಲಿರೆನ್ ಕೊನೇ ಪಂದ್ಯದಲ್ಲಿ ಮಾಡಿದ ದೊಡ್ಡ ಎಡವಟ್ಟಿನ ನಡೆಯೊಂದು ಗುಕೇಶ್ ಅತಿಕಿರಿಯ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಂತೆ ಮಾಡಿತು. 55ನೇ ನಡೆಯಲ್ಲಿ ಲಿರೆನ್ ಇಟ್ಟ ಆ ದಾಳದ ಎಡವಟ್ಟಿನ ವಿವರಣೆ ಇಲ್ಲಿದೆ...
ಬಿಳಿ ಕಾಯಿಯೊಂದಿಗೆ ಕೊನೇ ಪಂದ್ಯ ಆಡಿದ ಲಿರೆನ್ ಗೆಲುವಿಗೆ ಹೆಚ್ಚಿನ ಅವಕಾಶ ಹೊಂದಿದ್ದರು. ಹಿಂದಿನ 2 ಪಂದ್ಯಗಳನ್ನು ಬಿಳಿ ಕಾಯಿಯಲ್ಲೇ ಗೆದ್ದಿದ್ದ ಗುಕೇಶ್ ಕೂಡ ಕಪು$್ಪ ಕಾಯಿಯೊಂದಿಗೆ ಗೆಲ್ಲುವ ಅವಕಾಶ ವಿರಳವಿತ್ತು. ಹೀಗಾಗಿ ಗುಕೇಶ್ ಡ್ರಾದತ್ತಲೇ ಹೆಚ್ಚಿನ ಒಲವು ಹೊಂದಿದ್ದರು ಮತ್ತು ಮುಖಾಮುಖಿ ಟೈಬ್ರೇಕರ್ಗೆ ಸಾಗುವುದು ಬಹುತೇಕ ಖಚಿತವೆನಿಸಿತ್ತು. ಆದರೆ ಪಂದ್ಯ 50 ನಡೆಗಳನ್ನು ದಾಟಿದ ಬಳಿಕ 32 ವರ್ಷದ ಲಿರೆನ್ ಏಕಾಗ್ರತೆಯಲ್ಲಿ ಭಂಗ ಉಂಟಾಗಿ ಚೆಸ್ ಇತಿಹಾಸದಲ್ಲೇ ಅತಿದೊಡ್ಡ ಎಡವಟ್ಟಿನ ದಾಳ ಪ್ರಯೋಗ ಮಾಡಿ ಸೋಲು ಅನುಭವಿಸುವಂತಾಯಿತು.
ಲಿರೆನ್ 55ನೇ ನಡೆಯಲ್ಲಿ ತನ್ನ ರೂಕ್ (ಆನೆ) ದಾಳವನ್ನು ಎಫ್4ರಿಂದ ಎಫ್2ಕ್ಕೆ ಚಲಿಸಿದರು. ಇದು ಅತಿದೊಡ್ಡ ಎಡವಟ್ಟಿನ ಹೆಜ್ಜೆ ಆಗಿತ್ತು ಮತ್ತು ಗುಕೇಶ್ಗೆ ಪಂದ್ಯ ಗೆಲ್ಲಲು ವರದಾನವೆನಿಸಿತು. ಲಿರೆನ್ ಎಫ್2ಕ್ಕೆ ಇಟ್ಟ ರೂಕ್ ದಾಳವನ್ನು ಗುಕೇಶ್ ತನ್ನ ರೂಕ್ ದಾಳವನ್ನು ಬಲಿಕೊಟ್ಟು ಉರುಳಿಸಿದರು. ಬಳಿಕ ಇಬ್ಬರ ಬಿಷಪ್ (ರಥ) ದಾಳವೂ ಆಟದಿಂದ ಹೊರಬಿದ್ದಿತು. ಇದರಿಂದ ಬೋರ್ಡ್ ಮೇಲೆ ಲಿರೆನ್ರ ಕೇವಲ 2 ದಾಳ ಉಳಿದುಕೊಂಡರೆ, ಗುಕೇಶ್ 3 ದಾಳ ಹೊಂದಿದ್ದರು. ಅಂದರೆ ಲಿರೆನ್ ಕಿಂಗ್ ದಾಳದ ಜತೆಗೆ ಕೇವಲ ಒಂದು ದಾಳ (ಸೈನಿಕ) ಹೊಂದಿದ್ದರೆ, ಗುಕೇಶ್ ಕಿಂಗ್ ಜತೆಗೆ 2 ದಾಳ (2 ಸೈನಿಕ) ಹೊಂದಿದ್ದರು. ಇದರಿಂದಾಗಿ ಗುಕೇಶ್, ಲಿರೆನ್ಗೆ ಚೆಕ್ಮೇಟ್ ನೀಡಿದರು. ಅಲ್ಲದೆ ಓರ್ವ ಸೈನಿಕ ಕೊನೆಯ ಸಾಲಿಗೆ ತಲುಪಿದರೂ ಕ್ವೀನ್ ಆಗಿ (ರಾಣಿ) ಬಡ್ತಿ ಪಡೆದು ಗುಕೇಶ್ ಇನ್ನಷ್ಟು ಪ್ರಾಬಲ್ಯ ಸಾಧಿಸುವ ಅವಕಾಶವಿತ್ತು. ಹೀಗಾಗಿ ಲಿರೆನ್ಗೆ ಬಳಿಕ ಪಂದ್ಯದಲ್ಲಿ ಡ್ರಾ ಸಾಧಿಸುವ ಅಥವಾ ಗೆಲುವು ಸಾಧಿಸುವ ಯಾವ ಅವಕಾಶವೂ ಉಳಿದಿರದ ಕಾರಣ ಅವರು ಗುಕೇಶ್ ಗೆಲುವನ್ನು ಒಪ್ಪಿಕೊಂಡರು.
ಲಿರೆನ್ 55ನೇ ನಡೆಯಲ್ಲಿ ಇಟ್ಟ ಎಡವಟ್ಟಿನ ಹೆಜ್ಜೆ (ಎಫ್4 ಟು ಎಫ್2)
ಈ 55ನೇ ನಡೆಯ ಎಡವಟ್ಟು ಓರ್ವ ಸಾಮಾನ್ಯ ಚೆಸ್ ಆಟಗಾರನೂ ಮಾಡುವಂಥ ತಪ್ಪಲ್ಲ. ಆದರೆ ವಿಶ್ವ ಚಾಂಪಿಯನ್ಷಿನ್ನ ನಿರ್ಣಾಯಕ ಪಂದ್ಯದ ಒತ್ತಡದಲ್ಲಿ ಲಿರೆನ್ ಎಡವಿದರು. ಹೀಗಾಗಿ ಲಿರೆನ್ ತೀವ್ರ ಟೀಕೆಗಳನ್ನು ಎದುರಿಸುವಂತಾಗಿದೆ.