ಮದುವೆಯ ಮರುದಿನವೇ ಟೆಸ್ಟ್​ ಪಂದ್ಯ ಆಡಲು ಮೈದಾನಕ್ಕಿಳಿದಿದ್ದರು ಆರ್. ಅಶ್ವಿನ್​!

web ash family
Published on

ಬ್ರಿಸ್ಬೇನ್: ಭಾರತ ಕಂಡ ಅತ್ಯಂತ ಯಶಸ್ವಿ ಆಫ್​ ಸ್ಪಿನ್ನರ್​ ಎನಿಸಿರುವ ಆರ್. ಅಶ್ವಿನ್​ 2011ರಲ್ಲಿ ನವೆಂಬರ್​ 13ರಂದು ಚೆನ್ನೆ$ನಲ್ಲಿ ತಮಿಳು ಬ್ರಾಹ್ಮಣರ ಸಂಪ್ರದಾಯದಂತೆ ಪ್ರೀತಿ ನಾರಾಯಣ್​ ಅವರನ್ನು ವಿವಾಹವಾಗಿದ್ದರು. ಅಂದೇ ರಾತ್ರಿ ಕೋಲ್ಕತಗೆ ಪ್ರಯಾಣಿಸಿ ಮರುದಿನ ಈಡನ್​ ಗಾರ್ಡನ್ಸ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೆಸ್ಟ್​ ಪಂದ್ಯ ಆಡಲಿಳಿದಿದ್ದರು. ಅಶ್ವಿನ್​ಗೆ ಪ್ರೀತಿ ಬಾಲ್ಯ ಸ್ನೇಹಿತೆಯಾಗಿದ್ದರು.

ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಶ್ವಿನ್​ ಇಂಜಿನಿಯರಿಂಗ್​ ಪದವೀಧರರೂ ಆಗಿದ್ದು, ಸ್ವಂತ ಯುಟ್ಯೂಬ್​ ಚಾನಲ್​ (ಕುಟ್ಟಿ ಸ್ಟೋರಿಸ್​) ಕೂಡ ತೆರೆದಿದ್ದಾರೆ.

ಪರ್ತ್​ನಲ್ಲೇ ನಿವೃತ್ತಿ ನಿರ್ಧಾರ

ಅಶ್ವಿನ್​ ಹಾಲಿ ಸರಣಿಯ ಮೊದಲ ಟೆಸ್ಟ್​ ನಡೆದ ಪರ್ತ್​ನಲ್ಲೇ ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ ಅವರಿಗೆ ಪಿಂಕ್​ಬಾಲ್​ನಲ್ಲಿ ಅಡಿಲೇಡ್​ ಟೆಸ್ಟ್​ ಆಡುವಂತೆ ನಾನೇ ಮನವೊಲಿಸಿದ್ದೆ ಎಂದು ನಾಯಕ ರೋಹಿತ್​ ಶರ್ಮ ಬಹಿರಂಗಪಡಿಸಿದ್ದಾರೆ. ಆಸೀಸ್​ ಪ್ರವಾಸಕ್ಕೆ ಮುನ್ನ ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಅಶ್ವಿನ್​ ಕೇವಲ 9 ವಿಕೆಟ್​ ಕಬಳಿಸಿ ನಿರಾಸೆ ಮೂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net