ಪ್ರೊ ಕಬಡ್ಡಿ ಲೀಗ್​: ಸೀಸನ್​ 9ರಲ್ಲಿ ಗೆಲುವಿನ ಖಾತೆ ತೆರೆದ ತೆಲುಗು ಟೈಟಾನ್ಸ್, ಪಟನಾ ಪೈರೇಟ್ಸ್​ಗೆ ಸೋಲು

Telugu
Published on

ಬೆಂಗಳೂರು: ನಿನ್ನೆ (ಅ.11) ನಡೆದ ದಿನದ ಎರಡನೇ ಪಂದ್ಯದಲ್ಲಿ ರೈಡರ್​ಗಳಾದ ಮೋನು ಗೊಯತ್ (10) ಹಾಗೂ ಸಿದ್ದಾರ್ಥ್ ದೇಸಾಯಿ (7) ಸಂಘಟಿತ ನಿರ್ವಹಣೆಯಿಂದ ತೆಲುಗು ಟೈಟಾನ್ಸ್ ತಂಡ ಪಟನಾ ಪೈರೇಟ್ಸ್ ತಂಡವನ್ನು 30-21 ಅಂಕಗಳಿಂದ ಸೋಲಿಸಿತು.

ಅದ್ಭುತ ಗೆಲುವಿನೊಂದಿಗೆ ಟೈಟಾನ್ಸ್ ತಂಡ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಆರಂಭದಿಂದಲೂ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಇತ್ತಂಡಗಳು ಉತ್ತಮ ನಿರ್ವಹಣೆ ತೋರಿದವು. ಮೊದಲಾರ್ಧದಲ್ಲಿ ಪೈರೇಟ್ಸ್ ತಂಡವನ್ನು ಆಲೌಟ್ ಬಲೆಗೆ ಕೆಡವಿದ ಟೈಟಾನ್ಸ್ ತಂಡ 21-13 ಅಂಕಗಳಿಂದ ಮುನ್ನಡೆ ಸಾಧಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net