

ಹೈದರಾಬಾದ್: ಟಾಲಿವುಡ್ ಪ್ರಖ್ಯಾತ ಆ್ಯಂಕರ್ ಶ್ಯಾಮಲಾ ಇತ್ತೀಚೆಗೆ ತನ್ನ ಪತಿಯಿಂದಾಗಿ ಭಾರಿ ಸುದ್ದಿಯಲ್ಲಿದ್ದರು. ಶ್ಯಾಮಲಾ ಪತಿ ನರಸಿಂಹರೆಡ್ಡಿ ವಂಚನೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದರು.
ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆಂದು ಆರೋಪಿ ಮಹಿಳೆಯೊಬ್ಬರು ನರಸಿಂಹರೆಡ್ಡಿ ವಿರುದ್ಧ ರಾಯದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಂಧನಕ್ಕೆ ಒಳಗಾಗಿದ್ದ ನರಸಿಂಹರೆಡ್ಡಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಶ್ಯಾಮನಾ ನನ್ನ ಪತಿ ಅಂತಹ ವ್ಯಕ್ತಿಯಲ್ಲ ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದರು.
ಇದೀಗ ಶ್ಯಾಮಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಪತಿಯ ಬದಲಾಗಿ ಟೀಮ್ ಇಂಡಿಯಾ ಆಟಗಾರ ಭುವನೇಶ್ವರ್ ಕುಮಾರ್ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಶ್ಯಾಮಲಾ ಮತ್ತು ಭುವನೇಶ್ವರ್ ಕುಮಾರ್ ನೋಡಲು ಸಹೋದರ-ಸಹೋದರಿಯಂತೆ ಕಾಣುತ್ತಾರೆ. ಇಬ್ಬರ ನೋಟದಲ್ಲೂ ಸಾಮ್ಯತೆ ಇದೆ. ಹೀಗಾಗಿ ಇಬ್ಬರ ಮೀಮ್ಸ್ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಇದು ಶ್ಯಾಮಲಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಂಕರ್, ಹೀಗ್ಯಾಕೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ನನಗೂ ಭುವನೇಶ್ವರ್ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲಿಗೆ ಭುವಿಗೂ ಶ್ಯಾಮಲಾಗೂ ಯಾವುದೇ ಸಂಬಂಧವಿಲ್ಲ ಎಂಬುದ ಖಚಿತವಾಗಿದೆ. (ಏಜೆನ್ಸೀಸ್)